ಸಡಗರದ ಬಿಂಡಿಗನವಿಲೆ ಚನ್ನಕೇಶವ ರಥೋತ್ಸವ

05 NMG 01 (2)
ನಾಗಮಂಗಲ ತಾಲೂಕು ಬಿಂಡಿಗನವಿಲೆ ಶ್ರೀ ಚನ್ನಕೇಶವಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
Published on

ನಾಗಮಂಗಲ : ಪುರಾಣ ಪ್ರಸಿದ್ಧ ಬಿಂಡಿಗನವಿಲೆ ಶ್ರೀ ಚನ್ನಕೇಶವ ರಥೋತ್ಸವ ಭಾನುವಾರ ಸಡಗರದಿಂದ ಜರುಗಿತು. ರಾಮಾನುಜಾಚಾರ್ಯರು ಮತ್ತು ಗರುಡ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥೋತ್ಸವದ ಅಂಗವಾಗಿ ಒಂದು ವಾರ ಪೂಜಾ ಕೈಂಕರ್ಯಗಳು ಜರುಗಲಿವೆ. ಭಾನುವಾರ ದೇಗುದಲ್ಲಿ ಹಲವು ಧಾರ್ಮಿಕ ವಿಧಾನಗಳು ನೆರವೇರಿದವು. ಮೂಲ ಗರುಡ ಮತ್ತು ಚನ್ನಕೇಶವ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಂಗಳಾರತಿ ನಂತರ ಸರ್ವಾಲಂಕೃತ ಉತ್ಸವ ಮೂರ್ತಿಯನ್ನು ರಥದಲ್ಲಿರಿಸಿ ಮಂಗಳವಾದ್ಯ ಹಾಗೂ ವೇದ ಘೋಷಗಳೊಂದಿಗೆ ರಥೋತ್ಸವ ನೆರವೇರಿಸಲಾಯಿತು. ಸಹಸ್ರಾರು ಭಕ್ತರು ದೇವಾಲಯದ ಸುತ್ತ ರಥವನ್ನು ಎಳೆದರು. ಅನ್ನದಾನ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net