ಸಡಗರದ ದುರ್ಗಾದೇವಿ ಜಾತ್ರೆ

bkt-9-4
ಗುಡೂರ ಎಸ್ ಸಿ ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವದ ಪಲ್ಲಕ್ಕಿ ಮೆರವಣಿಗೆ ಸಂಭ್ರಮ.
Published on

ಬಾಗಲಕೋಟೆ: ಜಿಲ್ಲೆಯ ಗುಡೂರ ಎಸ್ ಸಿ ಗ್ರಾಮದ ದುರ್ಗಾದೇವಿ ಜಾತ್ರೆ ಮಹೋತ್ಸವ, ವಾರ್ಷಿಕೋತ್ಸವ ಹಾಗೂ ಪಲ್ಲಕ್ಕಿ ಮೆರವಣಿಗೆ ಉತ್ಸವವು ಸಾಂಪ್ರದಾಯಿಕ ಸಡಗರ, ಸಂಭ್ರಮದಲ್ಲಿ ಸಹಸ್ರಾರು ಭಕ್ತರ ಸಮೂಹದಲ್ಲಿ ಈಚೆಗೆ ಜರುಗಿತು.

ದುರ್ಗಾದೇವಿ ಮಹಾಭಿಷೇಕ, ಹೂವಿನ ಅಲಂಕಾರದೊಂದಿದೆ ವಿಶೇಷ ಪೂಜೆ ನೇರವೆರಿತು. ನಂತರ ದೇವಾಲಯದ ಗೋಪುರಕ್ಕೆ ಕಳಸಾರೋಹನ ಮಾಡಲಾಯಿತು ನಂತರ ಪಲ್ಲಕ್ಕಿ ಮೆರವಣಿಗೆ ಪುರವಂತರ ಸಾನ್ನಿಧ್ಯದಲ್ಲಿ ನಡೆಯಿತು.

ದುರ್ಗಾದೇವಿ ದೇವಾಲಯದಿಂದ ಹೊರಟ ಪಲ್ಲಕ್ಕಿ ಮೆರವಣಿಗೆ ಬನಶಂಕರಿ ದೇವಾಲಯ, ಮಹಾಂತೇಶ ಮಠ, ಪ್ಯಾಟಿ ಬಸವೇಶ್ವರ ದೇವಾಲಯ, ಸುಂಕದಕಟ್ಟೆ, ಹುಲ್ಲೇಶ್ವರ ದೇವಾಲಯ, ಮಲ್ಲಪ್ಪ ಜನಕಟ್ಟೆ ದೇವಸ್ಥಾನ ಮಾರ್ಗವಾಗಿ ಸಿಂಡಿಕೇಟ ಬ್ಯಾಂಕ್, ಗರಡಿ ಮನೆ, ಕಾಳಿಕಾಂಬ ಮತ್ತು ಮುನೇಶ್ವರ ದೇವಾಲಯಕ್ಕೆ ಆಗಮಿಸಿತು. ನಂತರ ಅನ್ನ ಸಂತರ್ಪಣೆ ನಡೆಯಿತು.

ಗ್ರಾಮದ ಭಜಂತ್ರಿ ಸಮಾಜದ ಅಧ್ಯಕ್ಷ ಶ್ರೀಶೈಲಪ್ಪ ಭಜಂತ್ರಿ, ಉಪಾಧ್ಯಕ್ಷ ಶಶಿಕಾಂತ ಭಜಂತ್ರಿ, ಹನುಮಂತ ಭಜಂತ್ರಿ, ಮಾರುತಿ ಭಜಂತ್ರಿ, ಮಳೆಯಪ್ಪ ಭಜಂತ್ರಿ, ಮುತ್ತಪ್ಪ ಭಜಂತ್ರಿ, ಅಶೋಕ ಭಜಂತ್ರಿ, ರಾಮಪ್ಪ ಭಜಂತ್ರಿ, ಬೊಮ್ಮಪ್ಪ ಭಜಂತ್ರಿ, ಯಮನೂರು ಭಜಂತ್ರಿ, ಶಿವಾನಂದ ಭಜಂತ್ರಿ, ದುರ್ಗಪ್ಪ ಭಜಂತ್ರಿ, ಗಂಗಮ್ಮ ಭಜಂತ್ರಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net