

ನಿಪ್ಪಾಣಿ: ನಗರದ ಸಟವಾಯಿ ರಸ್ತೆಯಲ್ಲಿರುವ ಸಟವಾಯಿ ದೇವಿಯ ತ್ರೈ ವಾರ್ಷಿಕ ಜಾತ್ರಾ ಮಯಹೋತ್ಸವ ಮಂಗಳವಾರ ಸಂಭ್ರಮದಿಂದ ಜರುಗಿತು. ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ದಾದಾರಾಜೆ ನಿಪ್ಪಾಣಿಕರ್ ಮತ್ತು ಸಮ್ರಾಜ್ ಲಕ್ಷ್ಮೀರಾಜೆ ನಿಪ್ಪಾಣಕರ್ ದಂಪತಿ ದೇವಿಗೆ ಅಭಿಷೇಕ, ಪೂಜೆ ನೆರವೇರಿಸಿದರು. ಸಚಿವೆ ಶಶಿಕಲಾ ಜೊಲ್ಲೆ ದೇವಿ ದರ್ಶನ ಪಡೆದರು. ಮಂದಿರದ ಸಮಿತಿಯಿಂದ ಶಶಿಕಲಾ ಜೊಲ್ಲೆ ಅವರನ್ನು ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಸ್ಥಾಯಿ ಸಮಿತಿ ಚೇರ್ಮನ್ ರಾಜೇಂದ್ರ ಗುಂಡೇಶಾ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಯುವಧುರೀಣ ಉತ್ತಮಮ ಪಾಟೀಲ, ಪ್ರಣವ ಮಾನವಿ, ವಿಜಯ ರಾಜೆ ದೇಸಾಯಿ, ನರೇಂದ್ರ ಬಾಡಕರ, ಅಶೋಕ ಲಿಗಾಡೆ, ಅಮಿತ್ ರಣದಿವೆ, ಸಂತೋಷ ಲಿಗಾಡೆ, ಪುಂಡಲೀಕ ಮರಾಠೆ ಇದ್ದರು.