

ಚಿತ್ರದುರ್ಗ: ತಾಲೂಕಿನ ಸಜ್ಜನಕೆರೆ ಗ್ರಾಮದಲ್ಲಿ ಸೋಮವಾರ ರಾತ್ರಿ ಕೆರೆಕೋಡಿ ಬಸವೇಶ್ವರ ಸ್ವಾಮಿ ಕಾರ್ತಿಕೋತ್ಸವ ಸಂಭ್ರಮದಿಂದ ಜರುಗಿತು. ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡು ಶ್ರದ್ಧಾ-ಭಕ್ತಿ ಸಮರ್ಪಿಸಿದರು.
ಮುಂಜಾನೆಯಿಂದ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು. ನಂತರ ಸ್ವಾಮಿಯ ಅಡ್ಡಪಲ್ಲಕ್ಕಿ ಮೆರವಣಿಗೆ ಗ್ರಾಮದಲ್ಲಿ ಸಂಚರಿಸಿತು. ತಟಮೆ, ಉರುಮೆ ಸದ್ದಿಗೆ ಯುವಪೀಳಿಗೆ ಕುಣಿದು ಸಂಭ್ರಮಿಸಿದರು. ನೂರಾರು ಭಕ್ತರು ದೇವರ ದರ್ಶನ, ಮಹಾಮಂಗಳಾರತಿ ಪಡೆದರು.