ಸಚಿವೆ ಹೆಬ್ಬಾಳಕರ್ ಗೆ ಸನ್ಮಾನ

dinada chitra 1
Published on

ಭಾಲ್ಕಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿ ಅಧಿಕಾರ ವಹಿಸಿಕೊಂಡಿರುವ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಗುರುಬಸವ ಪಟ್ಟದ್ದೇವರು ಸನ್ಮಾನಿಸಿ, ಶುಭ ಕೋರಿದರು.
ಬೆಂಗಳೂರಿನಲ್ಲಿ ಸಚಿವೆ ಹೆಬ್ಬಾಳಕರ್ ಅವರನ್ನು ಶ್ರೀಗಳು ಭೇಟಿಯಾಗಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ನೀಡಿ ಆಶೀರ್ವದಿಸಿ ಮಹಿಳಾ ಮತ್ತು ಕಲ್ಯಾಣ ಇಲಾಖೆ ಬಹುದೊಡ್ಡ ಜವಾಬ್ದಾರಿ ಆಗಿದೆ. ಅಂಥ ಮಹತ್ವದ ಇಲಾಖೆಗೆ ತಾವು ಸಚಿವೆಯಾಗಿರುವುದು ಸಂತಸ ತರಿಸಿದೆ. ತಮ್ಮ ಅವಧಿಯಲ್ಲಿ ಇಲಾಖೆ ಮತ್ತಷ್ಟು ಪ್ರಗತಿ ಸಾಧಿಸಲಿ ಎಂದು ಹಾರೈಸಿದರು.
ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣಗೌಡ, ಸದಸ್ಯ ಶಶಿಧರ ಕೋಸಂಬೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net