ಸಚಿವರೊಂದಿಗೆ ಚರ್ಚಿಸಿ ರೈತರ ಸಮಸ್ಯೆಗೆ ಪರಿಹಾರಕ್ಕೆ ಪ್ರಯತ್ನ

31RAM1
ಧನಲಕ್ಷ್ಮೀ ಕಾರ್ಖಾನೆಯ ಆಡಳಿತ ಮಂಡಳಿ ಸಭೆಯಲ್ಲಿ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿದರು. ಮಲ್ಲಣ್ಣ ಯಾದವಾಡ, ಬಸನಗೌಡ ದ್ಯಾಮನಗೌಡ್ರ ಇದ್ದರು.
Published on

ರಾಮದುರ್ಗ: ಧನಲಕ್ಷ್ಮೀ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರ ಪ್ರತಿ ಟನ್‌ಗೆ ನೀಡುವ ಎಫ್‌ಆರ್‌ಪಿ ದರದಲ್ಲಿ 109 ರೂ. ವ್ಯತ್ಯಾಸವಾಗುತ್ತಿರುವ ಕುರಿತು ಆರೋಪಗಳು ಕೇಳಿ ಬಂದಿದ್ದು, ಸಕ್ಕರೆ ಸಚಿವರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

ಪಟ್ಟಣದ ತುರನೂರ ಸಮೀಪದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಬ್ಬು ಬೆಳೆಗಾರರ, ಷೇರುದಾರರ, ಕಾರ್ಖಾನೆಯ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದರು. ಕಾರ್ಖಾನೆ ನಡೆಸುವುದು ಕಠಿಣದ ಕೆಲಸ. ಲೀಜ್ ಪಡೆದ ಕಂಪನಿ ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿದೆ. ಆಡಳಿತ ಮಂಡಳಿ ರೈತರ ಪರವಾಗಿ ಕೆಲಸ ಮಾಡುತ್ತದೆ ಎಂದರು.
ಕಾರ್ಖಾನೆ ಆಡಳಿತ ಮಂಡಳಿ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿ, ರೈತರ ಸಮಸ್ಯೆ ಪಟ್ಟಿ ಮಾಡಿ, ಆಡಳಿತ ಮಂಡಳಿ ಹಾಗೂ ಶಾಸಕರ ಸಹಯೋಗದಲ್ಲಿ ಸಕ್ಕರೆ ಸಚಿವರನ್ನು ಭೇಟಿಯಾಗಿ ಚರ್ಚಿಸಿ ಸಮಸ್ಯೆಗಳನ್ನು ರೈತ ಮುಖಂಡರ ಸಮ್ಮುಖದಲ್ಲಿ ಸರಿಪಡಿಸಿಕೊಳ್ಳೋಣ ಎಂದರು.

ಇಐಡಿ ಪ್ಯಾರಿ ಕಂಪನಿಯ ಕೇನ್ ಮ್ಯಾನೇಜರ್ಕೆ .ಎಂ. ಬೂದಿ ಮಾತನಾಡಿದರು. ಕಾರ್ಖಾನೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಬಸನಗೌಡ ದ್ಯಾಮನಗೌಡ್ರ, ನಿರ್ದೇಶಕರಾದ ಸುರೇಶ ಡುಳ್ಳೋಳ್ಳಿ, ಬಿ.ಎಂ. ತುಪ್ಪದ. ಎಂ.ಎಂ.ಆತಾರ, ಬಾಳಪ್ಪ ಹಂಜಿ, ಶಂಕರಗೌಡ ಪಾಟೀಲ, ಎ.ಸಿ.ಸುರಗ, ಐ.ಎಸ್.ಹರನಟ್ಟಿ, ನೀಲಪ್ಪ ಚಾಕಲಬ್ಬಿ, ದುಂಡಪ್ಪ ದೇವರಡ್ಡಿ, ರೈತ ಮುಖಂಡರಾದ ಶಾಸನಗೌಡ ಪಾಟೀಲ, ಎಫ್.ಆರ್. ನಾಡಗೌಡ್ರ, ಮಾರುತಿ ಕೊಪ್ಪದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net