ಸಚಿವರಿಗೆ ಎದೆ ನೋವು,ಬಸವೇಶ್ವರ ಆಸ್ಪತ್ರೆಗೆ ಆರೋಗ್ಯ ತಪಾಸಣೆ

ZAMEER AHMED KHAN
Published on

ಚಿತ್ರದುರ್ಗ: ನಗರದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಕಾಂಗ್ರೆಸ್ ಕಾರ‌್ಯಕರ್ತರ ಸಭೆಯಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ಸ ವ ಜಮೀರ್ ಅಹಮದ್‌ಖಾನ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಕೂಡಲೇ ಅವರನ್ನು ನಗರದ ಬಸವೇಶ್ವರ ಆಸ್ಪತ್ರೆಗೆ ದಾ ಲಾಗಿಸಲಾಗಿದೆ.
ಬಸವೇಶ್ವರ ಆಸ್ಪತ್ರೆಯ ಇಂಡಿಯಾನ ಹಾರ್ಟ್‌ಸೆಂಟರ್‌ನಲ್ಲಿ ಕೂಡಲೇ ಅವರಿಗೆ ಇಕೋ,ಇಸಿಜಿ ಪರೀಕ್ಷೆಗಳ ಸಹಿತ ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ಇಸಿಜಿ,ಇಕೋ ಟೆಸ್ಟ್‌ಗಳು ನಾರ್ಮಲ್ ಎಂದು ರಿಪೋರ್ಟ್ ಬಂದಿವೆ. ಆದರೂ ಟ್ರೋಫ್-ಟಿ(ಬ್ಲಡ್‌ಟೆಸ್ಟ್)ಗೆ ಒಳ ಪಡಿಸಲಾಗಿದ್ದು,ರಿಪೋರ್ಟ್‌ಗೆ ಕಾಯಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಲೋಕಸಭಾ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ನಗರದ ಉಮಾಪತಿ ಚೌಲ್ಟ್ರಿಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ‌್ಯಕರ್ತರ ಮತ್ತು ಮು ಖಂಡರ ಸಭೆಯಲ್ಲಿ ಭಾಗವಹಿಸಲು ಜಮೀರ್ ಅವರು ನಗರಕ್ಕೆ ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net