ಸಚಿವರನ್ನು ಮುತ್ತಿಗೆ ಹಾಕಿದ ರೈತರು

Jarge Muttige
Published on

ಚಿತ್ರದುರ್ಗ: ಮಧ್ಯ ಕರ್ನಾಟಕದ ಹಲವೆಡೆ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ. 7 ಗಂಟೆ ನೀಡುವುದು ಭರವಸೆಗೆ ಸೀಮಿತವಾಗಿದೆ ಎಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆ, ಅಖಂಡ ಕರ್ನಾಟಕ ರೈತಸಂಘದ ಕಾರ್ಯಕರ್ತರು ಜಿಪಂ ಕಚೇರಿ ಸಭಾಂಗಣ ಮುಂಭಾಗ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರನ್ನು ಮುತ್ತಿಗೆ ಹಾಕಲು ಪ್ರಯತ್ನಿಸಿ, ತರಾಟೆ ತೆಗೆದುಕೊಂಡರು.

ಅನೇಕ ಕಡೆಗಳಲ್ಲಿ 4ರಿಂದ 5 ಗಂಟೆ ಒಮ್ಮೆಗೆ ನೀಡಲಾಗುತ್ತಿದೆ. ಆಶ್ವಾಸನೆಯಂತೆ ರೈತರ ಜಮೀನುಗಳಿಗೆ 7ಗಂಟೆ ವಿದ್ಯುತ್ ಅನ್ನು ದಿನಕ್ಕೆ ಎರಡು ಬಾರಿ ಪೂರೈಸಬೇಕು. ಓವರ್ ಲೋಡ್ ಸಮಸ್ಯೆ ನೆಪ ಹೇಳದೆಯೇ ಉಪಕೇಂದ್ರಗಳನ್ನು ಸ್ಥಾಪಿಸಿ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು. ರೈತ ಮುಖಂಡರಾದ ಈಚಘಟ್ಟ ಸಿದ್ಧವೀರಪ್ಪ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಸತೀಶ್, ರವಿಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net