ಸಚಿವ ಮುನಿಯಪ್ಪ ಕಾರಿಗೆ ಗುದ್ದಿದ ಹಿಂಬದಿ ವಾಹನ

05_HSN_04
Published on

ಹಾಸನ: ನಗರದಲ್ಲಿ ಗುರುವಾರ ನಡೆದ ಜನ ಕಲ್ಯಾಣ ಸಮಾವೇಶಕ್ಕೆ ಆಗಮಿಸುತ್ತಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರ ಕಾರಿಗೆ ಹಿಂಬದಿಯಲ್ಲಿ ಬರುತ್ತಿದ್ದ ವಾಹನ ಗುದ್ದಿದ ಪರಿಣಾಮ ಕಾರು ಜಖಂಗೊಂಡಿತು.

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಶಾಂತಿಗ್ರಾಮ ಬಳಿ ಈ ಘಟನೆ ನಡೆದಿದೆ. ಬೆಂಗಳೂರಿನಿಂದ ಬರುತ್ತಿದ್ದಾಗ ಶಾಂತಿಗ್ರಾಮದ ಶುಲ್ಕ ವಸೂಲಿ ಕೇಂದ್ರದ ಹತ್ತಿರ ಸಚಿವರು ಬರುತ್ತಿದ್ದ ಕಾರು ನಿಧಾನ ಆದಾಗ ಹಿಂಬದಿಯಿಂದ ವೇಗವಾಗಿ ಬಂದ ಇನ್ನೋವಾ ಕಾರು ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ. ಆದರೆ ಸಚಿವರ ಕಾರಿಗೆ ಗುದ್ದಿದ ಇನ್ನೋವಾ ಕಾರಿನ ಮುಂಭಾಗ ಭಾಗಶಃ ಜಖಂ ಗೊಂಡಿದೆ. ಸಚಿವರ ಕಾರಿಗೂ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ. ನಂತರ ಸಚಿವರು ಬದಲಿ ಕಾರಿನಲ್ಲಿ ಸಮಾವೇಶಕ್ಕೆ ಬಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net