

ಯಾದಗಿರಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಈಡಿಗ ಸಮುದಾಯದ ಪ್ರಣವಾನಂದ ಶ್ರೀಗಳ ಬಗ್ಗೆ ಅವಹೇಳನಕಾರಿ ಮಾತನಾಡಿದ್ದು ಖಂಡನೀಯ ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಕಾರ್ಯದಶರ್ಿ ವೆಂಕಟೇಶ ಗುಂಡಾನೂರ ಆರೋಪಿಸಿದರು.`
09ರಂದು ಬೆಂಗಳೂರಿನಲ್ಲಿ ನಡೆದ ಸಮುದಾಯದ ಬೃಹತ್ ಸಮಾವೇಶದಲ್ಲಿ ಪ್ರಣವಾನಂದ ಸ್ವಾಮಿಗಳು ಸಮುದಾಯದ ಕಲ್ಯಾಣದ ಬಗ್ಗೆ ಸಕರ್ಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಸಚಿವರು ಆ ಸ್ವಾಮಿಗಳು ನಮ್ಮ ಸಮುದಾಯದವರೇ ಅಲ್ಲ ಎಂದು ಹೇಳಿದ್ದಲ್ಲದೆ, ತಲೆ ಹರಟೆ ಮಾಡಿತ್ತಾರೆ ಎಂಬ ಪದ ಬಳಕೆ ಮಾಡಿದ್ದು, ಬಂಗಾರಪ್ಪಗೆ ಶೋಭೆ ತರುವುದಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಸ್ವಾಮಿಗಳು ವಿಶ್ವ ಹಿಂದು ಪರಿಷತ್ ಮೂಲದಿಂದ ಬಂದಿದ್ದಾರೆ ಎಂದು ಸಚಿವರು ಹೇಳಿದ್ದಾರೆ. ಯಾಕೆ ಆ ಸಂಘಟನೆಯಲ್ಲಿದ್ದವರು ಸ್ವಾಮಿಗಳು ಆಗಬಾರದೆ?. ಕಳೆದ ಹಲವು ವರ್ಷಗಳಿಂದ ನಮ್ಮ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಗುರುಗಳು ತೊಡಗಿಸಿಕೊಂಡಿದ್ದಾರೆ. ಸಚಿವ ಮಧು ಬಂಗಾರಪ್ಪ ತಮ್ಮ ಹೇಳಿಕೆಯ ಬಗ್ಗೆ ಕ್ಷೆಮೆ ಕೇಳದಿದ್ದರೆ, ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಷ್ಟ್ರೀಯ ಈಡಿಗ ಮಹಾಮಂಡಳಿ ಮಹಿಳಾ ಘಟಕದ ಅದ್ಯಕ್ಷೆ ಅಂಬಿಕಾ ಗುತ್ತೇದಾರ, ಪ್ರಮುಖರಾದ ರಾಘವೇಂದ್ರ ಕಲಾಲ್, ಮಲ್ಲಯ್ಯಗುತ್ತೇದಾರ, ಶಿವರಾಜ ಗುತ್ತೇದಾರ, ಶಾಂತಗೌಡ, ಶರಣಗೌಡ ಇದ್ದರು.