ಸಚಿವ ಜಮೀರ್ ಅಹ್ಮದ್ ಉಚ್ಚಾಟನೆಗೆ ಆಗ್ರಹ

oplus_3276800
ವಕ್ಫ್ ಅಕ್ರಮ ವಿರೋಧಿಸಿ ಶಾಸಕ ಶರಣು ಸಲಗರ ನೇತೃತ್ವದಲ್ಲಿ ಬಸವಕಲ್ಯಾಣದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ ಅವರಿಗೆ ಸಲ್ಲಿಸಲಾಯಿತು. ಪ್ರಮುಖರಾದ ಸಿದ್ದು ಬಿರಾದಾರ, ಮಾಧವರಾವ ಹಸೂರೆ, ಕೃಷ್ಣಾ ಗೋಣೆ, ಕಮಲಾಕರ ಪಾಟೀಲ್, ಜ್ಞಾನೇಶ್ವರ ಮುಳೆ, ರಾಜಕುಮಾರ ಸಿರಗಾಪುರ, ದೀಪಕ ಗಾಯಕವಾಡ, ಸೂರ್ಯಕಾಂತ ಚಿಲ್ಲಾಬಟ್ಟೆ ಇತರರಿದ್ದರು.
Published on

ಬಸವಕಲ್ಯಾಣ: ರಾಜ್ಯದಲ್ಲಿ ವಕ್ಫ್ ಅಕ್ರಮ ವಿರೋಧಿಸಿ ನಗರದಲ್ಲಿ ಸೋಮವಾರ ಶಾಸಕ ಶರಣು ಸಲಗರ ನೇತೃತ್ವದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು.

ಅಂಬೇಡ್ಕರ್ ವೃತದಿಂದ ಶುರುವಾದ ಪ್ರತಿಭಟನಾ ಮೆರವಣಿಗೆ ಮುಖ್ಯರಸ್ತೆ ಮಾರ್ಗವಾಗಿ ತಹಸಿಲ್‌ವರೆಗೆ ಸಾಗಿತು. ವಕ್ಫ್ ಅಕ್ರಮ ಕುರಿತು ಆಕ್ರೋಶ ಹೊರಹಾಕಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಾಲೂಕು ಆಡಳಿತ ಸೌಧದ ಗೇಟ್ ತಳ್ಳಿ ಕಾರ್ಯಕರ್ತರು ಒಳಪ್ರವೇಶಿಸಿದರು. ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ ಅವರಿಗೆ ಸಲ್ಲಿಸಿ ಸಚಿವ ಜಮೀರ್ ಅಹ್ಮದ್ ಅವರನ್ನು ಕೂಡಲೇ ಉಚ್ಚಾಟಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಕ್ಷಮೆ ಕೇಳಿ ಮುಂದಿನ ದಿನಗಳಲ್ಲಿ ಯಾವುದೇ ವಕ್ಫ್ ಅದಾಲತ್ ನಡೆಸದಂತೆ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು.

ಶಾಸಕ ಶರಣು ಸಲಗರ ಮಾತನಾಡಿ, ಅಲ್ಪಸಂಖ್ಯಾತರನ್ನು ಖುಷಿಪಡಿಸಲು ರಾಜ್ಯ ಸರ್ಕಾರ ಅಧಿಕಾರಿಗಳ ಮೂಲಕ ರೈತರ ಪಹಣಿಯಲ್ಲಿ ವಕ್ಫ್ ಹೆಸರು ಸೇರಿಸಲು ಹುನ್ನಾರ ನಡೆಸಿದೆ ಎಂದು ವಾಗ್ದಾಳಿ ನಡೆಸಿದರು.

ಪ್ರಮುಖರಾದ ಸಿದ್ದು ಬಿರಾದಾರ, ಮಾಧವರಾವ ಹಸೂರೆ, ಕೃಷ್ಣಾ ಗೋಣೆ, ಕಮಲಾಕರ ಪಾಟೀಲ್, ಜ್ಞಾನೇಶ್ವರ ಮುಳೆ, ರಾಜಕುಮಾರ ಸಿರಗಾಪುರ, ದೀಪಕ ಗಾಯಕವಾಡ, ಸೂರ್ಯಕಾಂತ ಚಿಲ್ಲಾಬಟ್ಟೆ, ಪ್ರದೀಪ ಗಡವಂತೆ, ಕಮಲಾಕರ ಮೆಕಾಲೆ, ಪ್ರದೀಪ ಬೇಂದ್ರೆ, ರಾಜಕುಮಾರ ರಾಜೋಳೆ, ರತಿಕಾಂತ ಕೋಹಿನೂರ, ಶಿವಕುಮಾರ ಅಗ್ರೆ, ಶಂಕರ ನಾಗದೆ, ದಿಗಂಬರ ಜಲ್ದೆ, ಶ್ರೀನಿವಾಸ ಪಾಟೀಲ್, ಪುಷ್ಪರಾಜ ಹಾರಕೂಡೆ, ಪ್ರೇಮಿಳಾ ಡಾಂಗೆ ಇತರರಿದ್ದರು.

ವಕ್ಫ್ ಮಂಡಳಿ ರೈತರ ಜಮೀನು ಕಬಳಿಸಲು ಮುಂದಾಗಿದ್ದು ಖಂಡನೀಯ. ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾದೀತು.

| ಶರಣು ಸಲಗರ ಬಸವಕಲ್ಯಾಣ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net