

ಕಲಬುರಗಿ: ಬಿಜೆಪಿ ಸರ್ಕಾರದಲ್ಲಿ ಹಗರಣಗಳನ್ನು ಹೊರ ಹಾಕಿದ, ವಿಪಕ್ಷದ ಲೋಪಗಳಿಗೆ ತಕ್ಕ, ತೀಕ್ಷ ಉತ್ತರ ನೀಡುತ್ತಿರುವುದರಿಂದ ಸಚಿವ ಪ್ರಿಯಾಂಕ್ ರ‍್ಖಗೆ ಅವರನ್ನು ಎದುರಿಸಲಾಗದೇ ವೈಯಕ್ತಿಕ ನಿಂದನೆ ಮೂಲಕ ತೇಜೋವಧೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಎಂಎಲ್ಸಿ ಜಗದೇವ ಗುತ್ತೇದಾರ್ ಹೇಳಿದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ದೊಡ್ಡವರ ವಿರುದ್ಧ ಮಾತನಾಡಿದರೆ ದೊಡ್ಡವರಾಗುತ್ತೇನೆ ಎನ್ನುವ ಬ್ರಹ್ಮೆಯಲ್ಲಿದ್ದಾರೆ. ವಿಧಾನ ಪರಿಷತ್ನಲ್ಲೂ ಪ್ರಿಯಾಂಕ್ ರ‍್ಖಗೆ ಮಾತಾಡುವಾಗಿ ಮಧ್ಯಪ್ರವೇಶಿಸಿ, ಟರ‍್ಗೆಟ್ ಮಾಡುತ್ತಾರೆ. ರಾಜಕೀಯದಲ್ಲಿ ಟೀಕೆ, ಟಿಪ್ಪಣಿ ಸಹಜ, ಆದರೆ ವೈಯಕ್ತಿಕ ನಿಂದನೆ ಸಲ್ಲದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದರು.
ಛಲವಾದಿ ನಾರಾಯಣಸ್ವಾಮಿ ಅವರಿಗೆ ನಾಯಿಗೆ ಇರುವ ನಿಯತ್ತು ಇಲ್ಲ. ರಾಜಕೀಯಕ್ಕೆ ಮಲ್ಲಿಕರ‍್ಜುನ ರ‍್ಖಗೆ ಆಶರ‍್ವಾದದಿಂದ ಬೆಳೆದಿದ್ದು, ಇದೀಗ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ನಾಯಿ ಪದ ಬಳಸಿದ್ದು, ಅದಕ್ಕೆ ಇರುವ ನಿಯತ್ತು ಇಲ್ಲ ಎಂದರು.
ಪ್ರಿಯಾಂಕ್ ರ‍್ಖಗೆ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಎರಡು ಬಾರಿ ಸಚಿವರಾಗಿದ್ದಾರೆ. ಜನಸಾಮಾನ್ಯರಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಬಾರದು. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಪ್ರಶ್ನಿಸಿದ್ದಾರೆ. ಮೋದಿ ಪ್ರಶ್ನಾತಿತರೇ ಎಂದು ಪ್ರಶ್ನಿಸಿದರು.
ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಸಚಿವ ಪ್ರಿಯಾಂಕ್ ರ‍್ಖಗೆ ಏಳಿಗೆ ಸಹಿಸದೆ ವೈಯಕ್ತಿಕ ಟೀಕೆಗೆ ಇಳಿಯಲಾಗಿದೆ. ಉದ್ದೇಶ ಪರ‍್ವಕ ನಾಯಿ ಪದ ಬಳಸಿದ್ದು ಏಕೆ?. ಟೀಕೆ ಮಾಡಲಿ, ಗಾಧೆ ಮಾತು ಹೇಳಲಿ. ಆದರೆ ವೈಯಕ್ತಿಕ ನಿಂದನೆ ಸಹಿಸುವುದಿಲ್ಲ. ಲೋಪದೋಷ ಎತ್ತಿ ತೋರಿಸಲಿ. ಅವರದ್ದೇ ಪಕ್ಷದ ಮುಖಂಡ ಅಂಬಾರಾಯ ಅಷ್ಟಗಿ ಬೆಂಬಲಕ್ಕೆ ಬಿಜೆಪಿಗರು ನಿಲ್ಲುತ್ತಿಲ್ಲ ಎಂದಿದ್ದಾರೆ. ಇಂತವರು ಮತ್ತೊಬ್ಬರ ಬಗ್ಗೆ ಮಾತಾಡಾಲು ನೈತಿಕತೆ ಇಲ್ಲ ಎಂದರು.
ಶಾಸಕ ಎಂ.ವೈ.ಪಾಟೀಲ್, ಕಾಂಗ್ರೆಸ್ ಮುಖಂಡರಾದ ಶಿವಾನಂದ ಪಾಟೀಲ್ ಮರತೂರ, ಡಾ.ಕಿರಣ ದೇಶಮುಖ, ಸಂಗಮೇಶ ನಾಗನಳ್ಳಿ ಇದ್ದರು.