

ಕಲಬುರಗಿ: ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ೪೫ನೇ ಜನ್ಮದಿನ ನಿಮಿತ್ತ ನ.೩ರಿಂದ ೨೨ರವರೆಗೆ ನಗರದಲ್ಲಿ ಕಲ್ಯಾಣ ಕರ್ನಾಟಕ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಪ್ರಿಯಾಂಕ್ ಅಭಿಮಾನಿ ಬಳಗದ ಪ್ರಮುಖ ಪ್ರವೀಣ್ ಪಾಟೀಲ್ ಹರವಾಳ ಹೇಳಿದರು.
ಗರದ ಎಂಎಸ್‌ಕೆ ಮಿಲ್ ಮೈದಾನ, ನೂತನ ವಿದ್ಯಾಲಯ ಮತ್ತು ಪೀರ್ ಬಂಗಾಳಿ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ. ನ.೩ರಂದು ಮಧ್ಯಾಹ್ನ ೩ಕ್ಕೆ ಎನ್‌ವಿ ಮೈದಾನದಲ್ಲಿ ಟೂರ್ನಿಗೆ ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ ಚಾಲನೆ ನೀಡುವರು. ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ಎಂಎಲ್‌ಸಿ ಭೀಮರಾವ ಪಾಟೀಲ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಅಲೀಮ್ ಶೈನಿ ಮುಖ್ಯ ಅತಿಥಿಗಳಾಗಿರುವರು ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈವರೆಗೆ ೧೭೭ ತಂಡಗಳು ನೋಂದಾಯಿಸಿವೆ. ಕಲ್ಯಾಣ ಕರ್ನಾಟಕದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಊಟ ಮತ್ತು ವಸತಿ ಸೌಲಭ್ಯ ಒದಗಿಸಲಾಗುತ್ತಿದೆ. ಪಂದ್ಯಾವಳಿಯಲ್ಲಿ ಮೊದಲ ಬಹುಮಾನ ೧.೫೦ ಲಕ್ಷ, ರನ್ನರ್ ಅಪ್‌ಗೆ ೭೫ ಸಾವಿರ ರೂ. ನೀಡಲಾಗುವುದು ಎಂದರು. ಜೈಭೀಮ ದರ್ಗಿ, ಶಿವಾನಂದ ಹೊನಗುಂಟಿ, ಸಿದ್ಧಾರ್ಥ, ರಾಜು ಜಾನೆ, ಮಜರ್ ಆಲಂ ಖಾನ್ ಇತರರಿದ್ದರು.