ಸಚಿವ ಎಸ್ಸೆಸ್ಸೆಂ 56ನೇ ಜನ್ಮದಿನಾಚರಣೆ -ಕಾಂಗ್ರೆಸ್‌ನಿಂದ ಸೇವಾ ಕಾರ್ಯಕ್ರಮ

Screenshot_2023-09-08-08-20-02-681_com.android.chrome.jpg
Published on

ದಾವಣಗೆರೆ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಜನ್ಮದಿನ ಅಂಗವಾಗಿ ಜಿಲ್ಲಾ ಕಾಂಗ್ರೆಸ್‌ನಿಂದ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಹೇಳಿದರು.

ಸೆ. 22ರಂದು ಮಲ್ಲಿಕಾರ್ಜುನ್ ಅವರು 56ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳಲಿದ್ದು, ಸೆ.15 ರಿಂದ ಸೆ.22ರವರೆಗೆ ಅನೇಕ ಸೇವಾ ಕಾರ್ಯಕ್ರಮ ನಡೆಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅನಾಥಾಶ್ರಮದ ಮಕ್ಕಳು, ವೃದ್ಧಾಶ್ರಮ ನಿವಾಸಿಗಳು, ವಿಕಲಚೇತನ ಮಕ್ಕಳಿಗೆ ಅಗತ್ಯ ಪರಿಕರಗಳನ್ನು ವಿತರಿಸಲಾಗುವುದು. ಗೋ ಶಾಲೆಯ ಗೋವುಗಳಿಗೆ ಮೇವು ವಿತರಣೆ, ನಿರಾಶ್ರಿತರ ಕೇಂದ್ರಗಳಲ್ಲಿ ಅನ್ನ ಸಂತರ್ಪಣೆ, ರಕ್ತದಾನ ಶಿಬಿರ, ಸಸಿ ನೆಡುವ ಕಾರ್ಯಕ್ರಮವಿದೆ.

ಪಕ್ಷವಲ್ಲದೆ ದಾವಣಗೆರೆ ನಗರ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ ಎಸ್ಸೆಸ್ಸೆಂ ಅಭಿಮಾನಿಗಳು ಹಲವು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವರು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅನಿತಾಬಾಯಿ ಮಾಲತೇಶ್, ಅಯೂಬ್ ಪೈಲ್ವಾನ್, ಕೆ.ಜಿ. ಶಿವಕುಮಾರ್, ರಾಜೇಶ್ವರಿ, ಡೋಲಿ ಚಂದ್ರು, ಶ್ರೀಕಾಂತ್ ಬಗೇರ, ಹರೀಶ್ ಬಸಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net