

ಕಲಬುರಗಿ: ನಗರವೂ ದಿನೇ ದಿನೆ ಬೆಳೆಯುತ್ತಿದ್ದು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಲಕ್ಷಾಂತರ ಜನರು ನಿತ್ಯ ಹಲವು ಸಮಸ್ಯೆ, ಸವಾಲುಗಳ ಮಧ್ಯೆ ಜೀವನ ನಡೆಸುತ್ತಿದ್ದಾರೆ. ಜನರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗಿ ಭಾರತೀಯ ಜನತಾ ಪಕ್ಷದ ಪ್ರತಿನಿಧಿ, ಪಾಲಿಕೆಯ ಪ್ರತಿಪಕ್ಷ ನಾಯಕ ಗಟ್ಟಿ ಧ್ವನಿ ಆಗಬೇಕು ಎಂದು ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಸಲಹೆ ನೀಡಿದರು.
ಮಹಾನಗರ ಪಾಲಿಕೆಯ ಪ್ರತಿ ಪಕ್ಷ ನಾಯಕ ಸಚಿನ ಕಡಗಂಚಿ ಅವರನ್ನು ನೇಮಿಸಿ, ನೇಮಕ ಪತ್ರವನ್ನು ಮಂಗಳವಾರ ಹಸ್ತಾಂತರಿಸಿ ಮಾತನಾಡಿ, ನಗರದಲ್ಲಿ ನೈರ್ಮಲ್ಯ, ಹಸಿರೀಕರಣ, ಅನಧಿಕೃತ ಕಟ್ಟಡಗಳು, ತೆರಿಗೆ ಸಂಗ್ರಹ, ಪಾಲಿಕೆಯಲ್ಲಿನ ಭ್ರಷ್ಟಾಚಾರ, ಸ್ವಚ್ಛತೆ ಸೇರಿ ಹಲವು ಸಮಸ್ಯೆಗಳು ಇವೆ. ಎಲ್ಲ ಸಮಸ್ಯೆಗಳ ಬಗ್ಗೆ ದೃಢೀಕೃತ ಮಾಹಿತಿ, ಅಂಕಿ ಸಂಖ್ಯೆಗಳೊAದಿಗೆ ಅಧಿಕಾರಿಗಳು, ಮೇಯರ್ ಗಮನಕ್ಕೆ ತಂದು ಪರಿಹಾರಕ್ಕೆ ಶ್ರಮಿಸಬೇಕು ಎಂದು ನೂತನ ಪ್ರತಿ ಪಕ್ಷ ನಾಯಕ ಮತ್ತು ಬಿಜೆಪಿ ಪಾಲಿಕೆ ಸದಸ್ಯರಿಗೆ ಸಲಹೆ ನೀಡಿದರು.
ಉಮೇಶ ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್ ಓಕಳಿ, ಅನೀಲ ಜಾಧವ್, ಅಶೋಕ ಮಾನಕರ್, ವರದಾಶಂಕರ ಶೆಟ್ಟಿ, ಜಗದೇವ ಗುತ್ತೇದಾರ, ಸಂಗಮೇಶ ಮುನ್ನಳ್ಳಿ, ಬಸವರಾಜ ಮುನ್ನೋಳ್ಳಿ, ಗಂಗಾಧರ ಬಿಲಗುಂದಿ, ವಿಕಾಸ ಕರಣಿಕ ಇತರರಿದ್ದರು.