ಸಂಗೀತ ಉನ್ನತ ಕಲೆ

Web
Published on

ಧಾರವಾಡ: ಸಂಗೀತ ಪ್ರಕೃತಿ ಮತ್ತು ಮಾನವನ ಅವಿನಾಭಾವ ಸಂಬಂಧದ ದ್ಯೋತಕ. ಸಂಗೀತ ಒಂದು ಉನ್ನತ ಕಲೆ ಎಂದು ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ತಿಳಿಸಿದರು.
ನಗರದ ಆಲೂರ ವೆಂಕಟರಾವ್ ಭವನದಲ್ಲಿ ಸರಸ್ವತಿ ಸಂಗೀತ ವಿದ್ಯಾಲಯ ಹಾಗೂ ಬೆಂಗಳೂರಿನ ಸಪ್ತಕ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಗಾಯನ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಇಲಾಖೆ ಎಲ್ಲರ ಬೆನ್ನಹಿಂದೆ ನಿಲ್ಲುತ್ತದೆ ಎಂದರು.
ಭಾರತಿದೇವಿ ರಾಜಗುರು ಅಧ್ಯಕ್ಷತೆ ವಹಿಸಿದ್ದರು. ಕಲಕೇರಿ ಸಂಗೀತ ವಿದ್ಯಾಲಯದ ಪರವಾಗಿ ಕಲಾವಿದ ವೀರಣ್ಣ ಪತ್ತಾರ ಅವರನ್ನು ಸನ್ಮಾನಿಸಲಾಯಿತು. ಪುಣೆಯ ಪಂ. ರಘುನಂದ ಫಣಶಿಕರ ಗಾಯನ ಪ್ರಸ್ತುತಪಡಿಸಿದರು. ಪಂ. ರಘುನಾಥ ನಾಕೋಡ ತಬಲಾ ಹಾಗೂ ಬಸವರಾಜ ಹಿರೇಮಠ ಹಾರ್ಮೋನಿಯಂ ಸಾಥ್ ನೀಡಿದರು.
ಸರಸ್ವತಿ ಸಂಗೀತ ವಿದ್ಯಾಲಯದ ಅಧ್ಯಕ್ಷ ಉದಯ ದೇಸಾಯಿ, ಕಾರ್ಯದರ್ಶಿ ರಾಧಾ ದೇಸಾಯಿ, ಕಲಾವಿದರು, ಇತರರು ಇದ್ದರು. ಜಿ.ಎಸ್. ಹೆಗಡೆ ಸ್ವಾಗತಿಸಿದರು. ಮಾಯಾ ರಾಮನ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net