

ಚಿಕ್ಕಮಗಳೂರು: ತಾಲೂಕಿನ ಸಖರಾಯಪಟ್ಟಣದಲ್ಲಿ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆಯು ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ ಮತ್ತು ಎಸ್.ಎಲ್.ಬೋಜೇಗೌಡ ವಿಸರ್ಜನಾ ಮೆರವಣಿಗೆಗೆ ಈಡುಗಾಯಿ ಒಡೆದು ಚಾಲನೆ ನೀಡಿದರು.
ಸಖರಾಯಪಟ್ಟಣ ಗ್ರಾಮದ ಕೆ.ಎಂ.ರಸ್ತೆಯಲ್ಲಿ ಪ್ರತಿಷ್ಟಾಪಿಸಿದ್ದ ಹಿಂದೂ ಮಹಾಗಣಪತಿಯನ್ನು ಸಮಿತಿಯ ಪದಾಧಿಕಾರಿಗಳು ವಿಶೇಷಪೂಜೆ ಸಲ್ಲಿಸಿ ಅಲಂಕೃತ ವಾಹನದಲ್ಲಿ ಕುಳ್ಳಿರಿಸಿದರು. ಮೆರವಣಿಗೆಯುದ್ದಕ್ಕೂ ಕಲಾತಂಡಗಳು, ಸಂಪ್ರದಾಯಿಕ ವಾದ್ಯಗಳೊಂದಿಗೆ ಗ್ರಾಮದ ಸುತ್ತಮುತ್ತಲು ಭವ್ಯವಾದ ಮೆರವಣಿಗೆ ನಡೆಸಲಾಯಿತು.
ದಾರಿಯುದ್ದಕ್ಕೂ ಯುವಕ-ಯುವತಿಯರು ಭಾರತೀಯ ಸಂಪ್ರದಾಯದAತೆ ಉಡುಗೆತೊಟ್ಟು ವಿಸರ್ಜನಾ ಮಹೋತ್ಸದಲ್ಲಿ ಪಾಲ್ಗೊಂಡಿದ್ದರು. ಸುತ್ತಮುತ್ತಲಿನ ಅಂಗಡಿಮುAಗಟ್ಟುದಾರರು ಶ್ರೀ ಗಣಪತಿಗೆ ಪುಷ್ಪನಮನ ಸಲ್ಲಿಸಿದರು. ಕೆಲವರು ಗಣಪನ ವಿಗ್ರಹ ಮೂರ್ತಿ ಸಮೀಪ ಬರುತ್ತಿದ್ದಂತೆ ಸ್ಥಳದಲ್ಲೇ ಕೈಮುಗಿದು ಭಕ್ತಿ ಪರವಶರಾದರು.
ಗಣಪತಿ ಸಮಿತಿ ಪದಾಧಿಕಾರಿಗಳು ಬಿಳಿವಸ್ತç ಪಂಚೆ, ಶರ್ಟ್ಗಳನ್ನು ಧರಿಸಿ, ಕುತ್ತಿಗೆಯಲ್ಲಿ ಕೇಸರಿ ಶಾಲುಗಳನ್ನು ಸುತ್ತಿಕೊಂಡು ಮೆರವಣಿಗೆಯುದ್ದಕ್ಕೂ ತಂಡಗಳಾಗಿ ರಚಿಸಿಕೊಂಡು ಶ್ರೀಗಣಪತಿ ಮೂರ್ತಿಯನ್ನು ಗ್ರಾಮದ ರಾಜಬೀದಿಗಳಲ್ಲಿ ಕೊಂಡೊಯ್ಯುವ ಜವಾಬ್ದಾರಿ ಹೊತ್ತುಕೊಂಡಿದ್ದರು.
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಸಮಸ್ತ ಹಿಂದೂಗಳನ್ನು ಒಗ್ಗೂಡಿಸುವ ಸಲುವಾಗಿ ಬಾಲಗಂಗಾಧರ್ ತಿಲಕರು ಗಣಪತಿ ಮೂರ್ತಿಯನ್ನು ಪ್ರತಿಷ್ಟಾಪಿಸಿದ್ದರು. ಆ ನಿಟ್ಟಿನಲ್ಲಿ ದೇಶಾದ್ಯಂತ ಗಣಪನ ವಿಗ್ರಹವನ್ನು ಪೂಜಿಸುವ ಮೂಲಕ ಹಿಂದೂ ಸಮಾಜವು ತಿಲಕರ ಆಶಯಗಳಿಗೆ ಬೆನ್ನಲುಬಾಗಿ ನಿಂತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಹಿಂದೂಗಳ ಪವಿತ್ರ ಹಬ್ಬವಾಗಿರುವ ಗಣಪತಿ ಮಹೋತ್ಸವವು ಸರ್ವಜನಾಂಗದ ಬದುಕಿನಲ್ಲಿ ಶಾಂತಿ, ನೆಮ್ಮದಿಯನ್ನು ಕರುಣಲಿ. ಆ ನಿಟ್ಟಿನಲ್ಲಿ ಗ್ರಾಮದ ಯುವಕರು ಅಚ್ಚುಕಟ್ಟಿನಿಂದ ಶ್ರೀಯವರನ್ನು ಪ್ರತಿಷ್ಟಾಪಿಸಿ ವಿಸರ್ಜಿಸುತ್ತಿರುವುದು ಸ್ಪೂರ್ತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಹಿಂದೂ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಶಶಿಧರ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಹಾಗೂ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.