

ಕಡೂರು: ಸಖರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸುಮನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಅನುಪಮಾ ಕಾರ್ಯನಿರ್ವಹಿಸಿದರು.
ಬಳಿಕ ನಡೆದ ಅಭಿನಂದನಾ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್ ಮಾತನಾಡಿ, ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಡಿಸಿಸಿ ಬ್ಯಾಂಕಿರುವ ನಮ್ಮ ಕಟ್ಟಡ ಹಳೆಯದಾಗಿದ್ದು ಅದನ್ನು ಹೊಸದಾಗಿ ನಿರ್ಮಿಸಲು ಸರ್ಕಾರದ ಅನುದಾನದ ಅವಶ್ಯಕತೆ ಇದೆ. ಇದಕ್ಕೆ ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ನೂತನ ಅಧ್ಯಕ್ಷ ಸುಮನ್ ಮಾತನಾಡಿ, ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದರು. ಸಹಕಾರ ಸಂಘದ ಉಪಾಧ್ಯಕ್ಷ ಅಶೋಕ್, ಸದಸ್ಯರಾದ ಉಮೇಶ್, ಕಿರಣ್‌ಕುಮಾರ್, ಬಸವರಾಜು, ಮಲ್ಲೇಶಪ್ಪ, ಕೆಂಚಮ್ಮ, ರಾಧಾ, ಪ್ರಕಾಶ್, ಆನಂದನಾಯ್ಕ, ಮೂರ್ತಪ್ಪ, ಅಶೋಕ್, ಮೇಲ್ವಿಚಾರಕ ಪವನ್, ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್, ಗ್ರಾಮದ ಎಸ್.ಎಂ.ರತ್ನಾಕರ್, ಚೇತನ್, ರವಿಕುಮಾರ್ ಇತರರಿದ್ದರು.