

ಹಗರಿಬೊಮ್ಮನಹಳ್ಳಿ: ಮೊಹರಂ ಹಿನ್ನೆಲೆಯಲ್ಲಿ ತಾಲೂಕಿನ ನಾನಾ ಗ್ರಾಮಗಳಲ್ಲಿ ಹಸೇನ್, ಹುಸೇನ್ ಅವರನ್ನು ಪ್ರತಿಷ್ಠಾಪಿಸಲಾಗಿದ್ದು, ಭಕ್ತರು ಹರಕೆ ತೀರಿಸುತ್ತಿದ್ದಾರೆ.
ಪಟ್ಟಣದ ಗೊಲ್ಲರ ಓಣಿ, ಜೆ.ಜೆ.ನಗರ, ರಾಮನಗರ, ಅರಳಿಹಳ್ಳಿ, ಕುರುದಗಡ್ಡಿ, ಜಾಲಿನಗರ, ತಾಲೂಕಿನ ಬಲ್ಲಾಹುಣಸಿ, ಕಡಲಬಾಳು, ಹಂಪಾಪಟ್ಟಣದ ನೆಲ್ಲುದ್ರಿ, ಚಿಮ್ಮನಹಳ್ಳಿ, ತಂಬ್ರಹಳ್ಳಿ, ಚಿಂತ್ರಪಳ್ಳಿ, ಹಂಪಾಪಟ್ಟಣ, ಅನೇಕ ತಾಂಡಗಳಲ್ಲಿ ಭಕ್ತರು ಸಕ್ಕರೆ, ಬೆಲ್ಲದ ನೀರು ನೈವೇದ್ಯ ಅರ್ಪಿಸಿದರು. ಕೆಲವರು ಹುಲಿ, ಕರಡಿ, ಅಚ್ಚಳ್ಳಿ, ಹಿಡಂಬಿ ವೇಷ ಧರಿಸಿ ಹರಕೆ ತೀರಿಸಿದರು. ಜು.6 ಮೊಹರಂ ಕೊನೇ ದಿನವಾಗಿದ್ದು, ವೇಷಧಾರಿಗಳು ವೇಷ-ಭೂಷಣ ತೆಗೆದು ದೇವರಿಗೆ ಭಕ್ತಿ ಸಮರ್ಪಿಸುತ್ತಾರೆ.