ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸರ್ಕಾರ ನೆರವಾಗಲಿ

10 KAMPLI 02
Published on

ಕಂಪ್ಲಿ: ಪಟ್ಟಣದ ಅತಿಥಿ ಗೃಹ ಆವರಣದಲ್ಲಿ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಪದಾಧಿಕಾರಿಗಳು ಮಂಗಳವಾರ ಸಂಘಟನಾ ಸಭೆ ನಡೆಸಿದರು.

ಸಂಘದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಬಿ.ಗಂಗಾಧರ್ ಮಾತನಾಡಿ, ವಿಜಯನಗರ ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆ ಮರು ಆರಂಭಕ್ಕೆ ಒತ್ತಾಯಿಸಿ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ ನೇತೃತ್ವದಲ್ಲಿ ಹಂಪಿಯಿಂದ ಹೊಸಪೇಟೆ ತನಕ ಕಾಲ್ನಡಿಗೆೆ ಜಾಥಾ ನಡೆಸಲಾಗಿತ್ತು. ಇದೀಗ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕೆಂಚನಬಂಡಿ ಗ್ರಾಮದಲ್ಲಿ ರಾಣಿ ಸಂಯುಕ್ತಾ ಅವರು ಬಂಗಾರಿ ಶುಗರ್ಸ್ ಹೆಸರಿನಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಮುಂದಾಗಿದ್ದಾರೆ. ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸರ್ಕಾರ ಎಲ್ಲ ರೀತಿಯ ಅನುಕೂಲ ಒದಗಿಸಿಕೊಡಬೇಕು. ಕಂಪ್ಲಿಯಲ್ಲೂ ಸಕ್ಕರೆ ಕಾರ್ಖಾನೆ ಆರಂಭಿಸುವಂತೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ಎ.ಖಾದ್ರಿ ಮಾತನಾಡಿ, ವಿಜಯನಗರ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಗೊಂಡಲ್ಲಿ ವಿಜಯನಗರ, ಬಳ್ಳಾರಿ ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ ಎಂದರು. ತಾಲೂಕು ಅಧ್ಯಕ್ಷ ಗುಬಾಜಿ ರಾಮಾಂಜನಿ, ವಿಜಯನಗರ ಜಿಲ್ಲೆ ಮಹಿಳಾ ಘಟಕದ ಅಧ್ಯಕ್ಷೆ ಎಂ.ರತ್ನಮ್ಮ, ರಾಜ್ಯ ಉಪಾಧ್ಯಕ್ಷೆ ವಿ.ಉಷಾ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಕೆ.ಹರ್ಷಿತ್, ಪದಾಧಿಕಾರಿಗಳಾದ ಎಚ್.ಕಾಶಿಲಿಂಗಪ್ಪ ಕೆ.ಶ್ರೀನಿವಾಸ್, ಬಿ.ನೀಲಪ್ಪ, ಬಿ.ಶಂಕರ್, ಗೋಪಾಲ, ಗೊಗ್ಗುರು ಬಸವರಾಜ್, ಕೊಟ್ಟೂರೇಶ, ವೆಂಕಟೇಶ, ಅಂಬರೀಷ್, ಗೋವಿಂದಪ್ಪ, ಹನುಮಂತಪ್ಪ, ಬಾಬುಸಾಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net