

ಚಿತ್ರದುರ್ಗ: ನಿಗದಿತ ಕಾಲಮಿತಿಯೊಳಗೆ ವಿವಿಧ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಸರ್ಕಾರದ ಜಾರಿಗೊಳಿಸಿರುವ ಸಕಾಲ ಯೋಜನೆ ಕು ರಿತು,ಆಶಾ,ಅಂಗನವಾಡಿ ಕಾರ‌್ಯಕರ್ತೆಯರು,ಮನೆ,ಮನೆ ಭೇಟಿ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸ ಬೇಕೆಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಗರದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಆಶಾ ಕಾರ‌್ಯಕರ್ತೆಯರಿಗೆ ಸಕಾಲ ಯೋಜನೆ ಕುರಿತು ಏರ್ಪಡಿ ಸಿದ್ದ ಸಕಾಲ ಅರಿವು-ಹರಿವು ಜಾಗೃತಿ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿ,ಸಕಾಲದೆಡೆ ನಾಗರಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದರು.
ಪಿಂಚಣಿ,ಜಾತಿ ಆದಾಯ ಪ್ರಮಾಣಪತ್ರ ಮತ್ತಿತರ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಗ್ರಾಮಒನ್,ಅಟಲ್ ಜನಸ್ನೇಹಿ ಕೇಂದ್ರ ಮೊದಲಾದೆಡೆ ಮುಂತಾದೆಡೆ ಸಕಾಲ ಯೋಜನೆಯಡಿ ಅರ್ಜಿ ಸಲ್ಲಿಸ ಬೇಕೆಂದ ಅವರು,ಸಕಾಲದಿಂದ ಮಧ್ಯವರ್ತಿಗಳ ಹಾವಳಿಗೆ ಕಡಿವಾ ಣ ಬೀಳುತ್ತದೆ ಎಂದರು. ಡಿಎಚ್‌ಒ ಡಾ.ಆರ್.ರಂಗನಾಥ್,ಡಾ. ಚಂದ್ರಶೇಖರ ಕಂಬಾಳಿಮಠ ಮತ್ತಿತರರು ಇದ್ದರು.