ಸಕಾಲದಲ್ಲಿ ವಿಲೇವಾರಿ ಆಗದಿದ್ದರೆ ದಂಡ

1106kLb08
Published on

ಕಲಬುರಗಿ: ಸಾರ್ವಜನಿಕರಿಗೆ ತ್ವರಿತ ಮತ್ತು ಕಾಲಮಿತಿಯಲ್ಲಿ ವಿಲೇವಾರಿ ಮಾಡಲು "ಸಕಾಲ್​" ಯೋಜನೆ ಜಾರಿಗೊಳಿಸಿದ್ದು, ಬಾಕಿ ಇಟ್ಟುಕೊಂಡರೆ ಮುಲಾಜಿಲ್ಲದೆ ಸಂಬಂಧಿಸಿದ ಅಧಿಕಾರಿ, -ಸಿಬ್ಬಂದಿ ಸಂಬಳದಲ್ಲಿ ಕಡಿತ ಮಾಡಿ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ಖಡಕ್​ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಕಾಲ್​, ಐಪಿಜಿಆರ್​ಎಸ್​, ಸಿಸಿಎಂಎಸ್​, ಸಿಎಂ ಜನಸ್ಪಂದನ, ಕಲಬುರಗಿ ಕನೆಕ್ಟ್​ ರ‍್ಜಿ ವಿಲೇವಾರಿ ಸಂಬಂಧ ಪ್ರಗತಿ ಪರಿಶೀಲಿಸಿ ಮಾತನಾಡಿ, ಸರ‍್ವಜನಿಕರಿಗೆ ತ್ವರಿತ ಸೇವೆ ಒದಗಿಸಲು "ಇಂದು ನಾಳೆ ಇನ್ನಿಲ್ಲ, ಹೇಳಿದ ದಿನ ತಪ್ಪಲ್ಲ, ಘೋಷವಾಕ್ಯದೊಂದಿಗೆ ಸಕಾಲ್​ ಅಧಿನಿಯಮ ತಂದಿದ್ದು, ಅಧಿಕಾರಿ -ಸಿಬ್ಬಂದಿ ಇದರ ಉದ್ದೇಶ ಅರಿತು ಕೆಲಸ ಮಾಡಬೇಕು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರ‍್ಕಾರದ ಮುಖ್ಯ ಕರ‍್ಯರ‍್ಶಿ ಡಾ.ಶಾಲಿನಿ ರಜನೀಶ್​ ಅವರ ಕನಸಿನ ಯೋಜನೆ ಇದಾಗಿದೆ. ಬಾಕಿ ರ‍್ಜಿ ವಿಲೇವಾರಿ ಮಾಡಬೇಕು. ಮಹಾನಗರ ಪಾಲಿಕೆಯಲ್ಲಿ ೯೮ ಸೇರಿ ಇಂದಿನ ದಿನಕ್ಕೆ ವಿವಿಧ ಇಲಾಖೆಯಲ್ಲಿ ೩೨೮ ರ‍್ಜಿ ವಿಲೇವಾರಿಗೆ ಬಾಕಿ ಇದೆ. ಸಂಬಂಧಿಸಿದ ಅಧಿಕಾರಿಗಳು ಇಲಾಖಾವಾರು ಲಾಗಿನ್​ನಲ್ಲಿ ರ‍್ಜಿ ವಿಲೇವಾರಿ ಮಾಡಿ, ಶೂನ್ಯಕ್ಕೆ ತನ್ನಿ ಎಂದರು.

ಸಕಾಲ್​ದ ರ‍್ಜಿ ೩೦ ದಿನದಲ್ಲಿ ವಿಲೇವಾರಿ ಮಾಡಬೇಕು. ಅವಧಿ ರ‍್ಜಿ ವಿಲೇವಾರಿಗೆ ಸಾಕಾಗುತ್ತಿದೆ. ಕಾಲಮಿತಿಯಲ್ಲಿ ಸೇವೆ ನೀಡಲು ವಿಳಂಬವಾದಲ್ಲಿ ಸಂಬಂಧಿಸಿದ ಅಧಿಕಾರಿ, -ಸಿಬ್ಬಂದಿ ವೇತನ, ಬಡ್ತಿಗೂ ತಡೆ ಹಿಡಿಯಬೇಕು. ಕೆಲ ಇಲಾಖೆಯಲ್ಲಿ ತಾಂತ್ರಿಕ ಸಮಸ್ಯೆ ಕಾರಣ ರ‍್ಜಿ ವಿಲೇಗೆ ಸಮಸ್ಯೆ ಆಗುತ್ತಿದ್ದು, ಸಕಾಲ ಮಿಷನ್​ ನರ‍್ದೇಶಕರಿಗೆ ಪತ್ರ ಬರೆಯಬೇಕು ಎಂದರು.

ಐಪಿಜಿಆರ್​ಎಸ್​ ಬಾಕಿ ರ‍್ಜಿ ಶುಕ್ರವಾರದೊಳಗೆ ವಿಲೇ ಆಗದಿದ್ದಲ್ಲಿ, ಸಂಬಂಧಿಸಿದವರಿಗೆ ನೋಟಿಸ್​ ನೀಡಿ ಎಂದು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ಸೂಚಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ರ‍್ಖಗೆ ಅವರ ಕನಸಿನ ಯೋಜನೆ "ಕಲಬುರಗಿ ಕನೆಕ್ಟ್​" ನಲ್ಲಿ ೯೫ ರ‍್ಜಿ ವಿಲೇವಾರಿಗೆ ಬಾಕಿ ಇದ್ದು, ಕೂಡಲೆ ವಿಲೇವಾರಿಗೊಳಿಸಿ ಎಂದರು.

ಕರ‍್ಟ್​ ಕೇಸ್​ ಮಾನಿಟರಿಂಗ್​ ಸಿಸ್ಟಮ್​ ನಲ್ಲಿ ಜಿಲ್ಲೆಯಾದ್ಯಂತ ವಿವಿಧ ಇಲಾಖೆಗೆ ಸಂಬಂಧಿಸಿದ ೧,೨೦೩ ಪ್ರಕರಣಗಳು ನ್ಯಾಯಲಯದಲ್ಲಿ ಬಾಕಿ ಇದ್ದು, ತ್ವರಿತ ವಿಲೇವಾರಿ ಮಾಡಬೇಕು. ರಿಟ್​ ಪಿಟೀಷನ್​, ರಿಟ್​ ಅಪೀಲ್​ ಪ್ರಕರಣಗಳಲ್ಲಿ ಕರ‍್ಟ್​ ನಲ್ಲಿ ಕೇಸ್​ ದಾಖಲಾಗಿದ್ದ ಮಾಹಿತಿ ದೊರೆತ ತಕ್ಷಣ ಲಿಟಿಗೇಷನ್​ ಕಂಡಕ್ಟಿಂಗ್​ ಆಫೀಸರ್​ ನೇಮಿಸಬೇಕು. ರ‍್ಕಾರಿ ವಕೀಲರನ್ನು ಭೇಟಿಯಾಗಿ ಇಲಾಖೆ ವಾದ ಮಂಡಿಸಬೇಕು. ಪ್ರಕರಣ ವಿಲೇವಾರಿ ನಂತರ ಕರ‍್ಟ್​ ತರ‍್ಪಿನಂತೆ ಕ್ರಮ ವಹಿಸಲು ಇಲಾಖೆ ಮುಖ್ಯಸ್ಥರಿಗೆ ಮಾಹಿತಿ ನೀಡಬೇಕು ಎಂದರು.

ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಎಸ್​.ಪಿ. ಅಡ್ಡೂರು ಶ್ರೀನಿವಾಸಲು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net