ಸಕಾಲಕ್ಕೆ ಸಾಲ ಮರುಪಾವತಿಸಿ

01
Published on

ಹುಣಸಗಿ : ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿದರೆ ಸಹಕಾರಿ ಸಂಘ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ್ ಹೇಳಿದರು.

ಪಟ್ಟಣದಲ್ಲಿ ಸಹಕಾರ ಸಂಘದ ೨೦೨೨-೨೩ರ ನೇ ವಾರ್ಷಿಕ ಮಹಾಸಭೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ಸಣ್ಣ-ಪುಟ್ಟ ವ್ಯಾಪಾರಸ್ಥರನ್ನು ಷೇರುದಾರರಾಗಿ ಮಾಡಬೇಕು. ಸಂಘದ ನೂತನ ಕಟ್ಟಡಕ್ಕೆ ಸ್ಥಳಾವಕಾಶ ಇದ್ದರೆ ಡಿಸಿಸಿ ಅಥವಾ ಅಪೆಕ್ಸ್ ಬ್ಯಾಂಕ್‌ನಿAದ ಆರ್ಥಿಕ ನೆರವು ಒದಗಿಸುವುದಾಗಿ ತಿಳಿಸಿದರು.

ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷ ಬಸವರಾಜ ಮೇಲಿನಮನಿ ಪ್ರಾಸ್ತಾವಿಕ ಮಾತನಾಡಿದರು. ಸಂಘದ ಸಿಇಒ ಮಹಾಂತೇಶ ಮುರಾಳ ವಾರ್ಷಿಕ ವರದಿ ವಾಚಿಸಿದರು.

ಲೆಕ್ಕ ಪರಿಶೋಧಕ ಶರಣಬಸವ ಮಾಡೋಳೆ, ಉಪಾಧ್ಯಕ್ಷ ಶಾಂತಗೌಡ ಹೇಮನೂರ, ನಿರ್ದೇಶಕರಾದ ಪದ್ಮಾವತಿ ದೇಶಪಾಂಡೆ, ಚಂದ್ರಶೇಖರ ದೇಸಾಯಿ, ದೇವು ಬೈಬಾಳ, ಚಂದ್ರಶೇಖರ, ಅಮರೇಶ ವೈಲಿ, ರಾಜೇಶ್ವರಿ ತಾಳಿಕೋಟಿ ಇತರರಿದ್ದರು. ಶಿವಲೀಲಾ ಮುರಾಳ ಪ್ರಾರ್ಥಿಸಿದರು. ಮಹಾಂತೇಶ ಮುರಾಳ ಸ್ವಾಗತಿಸಿ ವಂದಿಸಿದರು. ಸಕಾಲಕ್ಕೆ ಸಾಲ ಮರುಪಾವತಿ ಮಾಡಿದವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net