ಸಕಾಲಕ್ಕೆ ಸಾಲ ತೀರಿಸಿದರೆ ಮಾತ್ರ ಸಹಕಾರ ಬ್ಯಾಂಕ್‌ಗಳು ಅಭಿವೃದ್ಧಿ

SOR WEB
Published on

ಸೊರಬ: ಸಹಕಾರ-ಸಂಘಗಳ ಆರ್ಥಿಕ ಅಭಿವೃದ್ಧಿಯಲ್ಲಿ ಷೇರುದಾರರ ಪಾತ್ರ ಹಿರಿದು. ಪ್ರತಿಯೊಬ್ಬರು ಸಕಾಲಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿ, ಸಂಘದ ಪ್ರಗತಿಗೆ ಶ್ರಮಿಸುವ ಅಗತ್ಯವಿದೆ ಎಂದು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ನಾಗರಾಜ ಗೌಡ ಚಿಕ್ಕಾವಲಿ ಹೇಳಿದರು.

ಶುಕ್ರವಾರ ಲಯನ್ಸ್ ಕಲ್ಯಾಣ ಮಂಟಪದಲ್ಲಿ ಸೊರಬ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಕಳೆದ 80 ವರ್ಷಗಳಿಂದ ಬ್ಯಾಂಕ್ ಆಡಳಿತ ವ್ಯಾಪ್ತಿಯ ರೈತರಿಗೆ ಅನುಕೂಲವಾಗುವಂತೆ ಬೆಳೆ, ಮಧ್ಯಮಾವಧಿ ಹಾಗೂ ಜಮೀನು ಸಾಲ ಸೇರಿದಂತೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಬ್ಯಾಂಕಿನ ಷೇರುದಾರ ಸದಸ್ಯರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಬ್ಯಾಂಕಿನಲ್ಲಿ 5580 ಷೇರುದಾರರಿದ್ದು 1.20 ಕೋಟಿ ರೂ. ಷೇರು ಸಂಗ್ರಹವಾಗಿದೆ. ರಾಜ್ಯ ಸರ್ಕಾರದ ಷೇರು ಬಂಡವಾಳ 7.50 ಲಕ್ಷ ರೂಪಾಯಿ. ಒಟ್ಟು ಠೇವಣಿ 105.47 ಲಕ್ಷ ರೂ. ಹಾಗೂ 2.50 ಕೋಟಿ ರೂ. ಸಾಲ ನೀಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net