ಸಕಾಲಕ್ಕೆ ಪಶು ಆಹಾರ ಪೂರೈಕೆ

16hgr1 dairy
Published on

ಹಲಗೂರು: ಹಾಲು ಉತ್ಪಾದಕರಿಗೆ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಯಾಗದಂತೆ ಸರಿಯಾದ ಸಮಯಕ್ಕೆ ಫೀಡ್ಸ್ (ಪಶು ಆಹಾರ)ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಮನ್‌ಮುಲ್ ನಿರ್ದೇಶಕ ಕೃಷ್ಣೇಗೌಡ ಭರವಸೆ ನೀಡಿದರು.

ಗೊಲ್ಲರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಮಂಗಳವಾರ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಸಂಘದ ಕಟ್ಟಡ ನಿಧಿಯಿಂದ ಒಂದು ಗೋಡೌನ್ ನಿರ್ಮಾಣವಾದರೆ ಹೆಚ್ಚು ಫೀಡ್ಸ್ ಶೇಖರಿಸಲು ಅವಕಾಶವಾಗುತ್ತದೆ. ಆಗ ನಿಮಗೆ ಯಾವುದೇ ತೊಂದರೆ ಆಗದಂತೆ ಫೀಡ್ಸ್ ದೊರಕುತ್ತದೆ. ನಿಮ್ಮ ಸಂಘದಲ್ಲಿರುವ ಕಟ್ಟಡ ನಿಧಿಯಿಂದ ಕಟ್ಟಡದ ಸುತ್ತಲಿನ ಕಾಂಪೌಂಡ್ ಅನ್ನು ನಿರ್ಮಿಸಲು ಚರ್ಚಿಸಲಾಗಿದೆ. ನಿಮಗೆ ಅವಶ್ಯಕತೆ ಇರುವ ಮ್ಯಾಟ್‌ಗಳನ್ನು ಟೆಂಡರ್ ಬಂದ ಮೇಲೆ ನೀಡಲಾಗುತ್ತದೆ. ತಾಲೂಕಿಗೆ 250 ಮಿಲ್ಕಿ ಮಿಷನ್ (ಹಾಲು ಕರೆಯುವ ಯಂತ್ರ) ಅವಶ್ಯಕತೆ ಇದೆ. ಆದರೆ ಈಗ 104 ಮಾತ್ರ ಲಭ್ಯವಿದೆ. ಮುಂದಿನ ದಿಗನಳಲ್ಲಿ ಹೆಚ್ಚು ಮಿಲ್ಕಿ ಮಿಷಿನ್ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಎಮ್ಮೆ ಹಾಲಿಗೆ ದೆಹಲಿಯಲ್ಲಿ ಬಹಳ ಬೇಡಿಕೆ ಇದೆ. ಮಳವಳ್ಳಿ ತಾಲೂಕಿನಿಂದ ಎಮ್ಮೆ ಹಾಲನ್ನು ಶೇಖರಿಸಿ ದೆಹಲಿಗೆ ಡೆಲ್ಲಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕಿದೆ. ಮುನ್‌ಮುಲ್‌ನಿಂದ ಎಮ್ಮೆ ಕೊಳ್ಳುವವರಿಗೆ 10 ಸಾವಿರ ರೂ.ಸಹಾಯಧನ ನೀಡಲಾಗುತ್ತದೆ. ಆದ್ದರಿಂದ ತಾಲೂಕಿನಲ್ಲಿ ಹೆಚ್ಚು ಎಮ್ಮೆಗಳನ್ನು ತೆಗೆದುಕೊಂಡು ಎಮ್ಮೆ ಹಾಲು ಸರಬರಾಜು ಮಾಡುವಂತೆ ಸಲಹೆ ನೀಡಿದರು.

ಸಂಘಟಕ್ಕೆ ಈ ವರ್ಷ 20,83,000 ರೂ.ನಿವ್ವಳ ಲಾಭ ಬಂದಿದ್ದು ,ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹಾಲು ಸರಬರಾಜು ಮಾಡುವ ಮುಖಾಂತರ ಆರ್ಥಿಕವಾಗಿ ಮತ್ತಷ್ಟು ಅಭಿವೃದ್ಧಿ ಹೊಂದಬೇಕು ಎಂದರು.

ಮನ್ಮುಲ್ ನಿರ್ದೇಶಕ ಕೃಷ್ಣೇಗೌಡ, ಗೆಜ್ಜಲಗೆರೆ ತಾಲೂಕು ಮುಖ್ಯಸ್ಥ ಡಾ.ಸದಾಶಿವ, ವಿಸ್ತರಣಾಧಿಕಾರಿ ರವೀಶ್ ಅವರನ್ನು ಸನ್ಮಾನಿಸಲಾಯಿತು. ಗೊಲ್ಲರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ಮಹಾದೇವ್, ಉಪಾಧ್ಯಕ್ಷೆ ಜಿ.ಭಾಗ್ಯಾ, ನಿರ್ದೇಶಕರಾದ ಗೋಪಾಲ್, ಎನ್.ಡಿ.ವೆಂಕಟೇಶ್, ನಾಗರಾಜು, ಮಹಾದೇವ, ಸಿದ್ದಯ್ಯ, ಎಚ್.ರವಿ, ಚೆನ್ನಮ್ಮ, ಶಿವ ಮುತ್ತಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಲಿಂಗೇಗೌಡ, ಹಾಲು ಪರೀಕ್ಷಕ ಎಚ್.ಎಂ.ಉಮೇಶ್, ಸಹಾಯಕ ಕಿರಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net