ಸಕಾಲಕ್ಕೆ ಕಾಮಗಾರಿ ಪೂರ್ಣಗೊಳಿಸಿ

1manju9-Web
ಬೆಳಗಾವಿ ಗೃಹ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಂಸದೆ ಮಂಗಲ ಅಂಗಡಿ ಚರ್ಚಿಸಿದರು. ಆರ್‌ವಿಎನ್‌ಎಲ್ ಅರುಣಕುಮಾರ, ಎಸ್. ಸುನೀಲ, ಬಕುಲ ಜೋಶಿ ಇದ್ದರು.
Published on

ಬೆಳಗಾವಿ: ಬೆಳಗಾವಿ ರೈಲ್ವೆ ನಿಲ್ದಾಣ ಕಾಮಗಾರಿಗಳನ್ನು ಸಕಾಲಕ್ಕೆ ಪೂರ್ಣಗೊಳಿಬೇಕು ಎಂದು ಅಧಿಕಾರಿಗಳಿಗೆ ಸಂಸದೆ ಮಂಗಲ ಅಂಗಡಿ ಸೂಚಿಸಿದ್ದಾರೆ. ನಗರದ ಗೃಹ ಕಚೇರಿಯಲ್ಲಿ ಗುರುವಾರ ರೈಲ್ ವಿಕಾಸ ನಿಗಮದ ಬೆಳಗಾವಿ ಘಟಕದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬೆಳಗಾವಿ ರೈಲು ನಿಲ್ದಾಣದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಯ ಮಾಹಿತಿ ಪಡೆದರು. 190 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ರೈಲ್ವೆ ನಿಲ್ದಾಣದ ವಿವಿಧ ಹಂತದ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಎಂದರು. ದಿ.ಸುರೇಶ ಅಂಗಡಿ ಅವರು ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾಗ ಬೆಳಗಾವಿ ರೈಲು ನಿಲ್ದಾಣವನ್ನು ಅತ್ಯಾಧುನಿಕ ನಿಲ್ದಾಣವನ್ನಾಗಿ ಮಾಡಬೇಕು ಎಂದು ಕನಸು ಕಂಡಿದ್ದರು. ಯೋಜನೆ ಅನುಷ್ಠಾನದಲ್ಲೂ ಅವರು ಯಶಸ್ವಿಯಾದರು ಎಂದು ಮಂಗಲ ಅವರು ಸ್ಮರಿಸಿದರು. ಆರ್‌ವಿಎನ್‌ಎಲ್ ಅರುಣಕುಮಾರ, ಎಸ್.ಸುನೀಲ, ಬಕುಲ ಜೋಶಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net