ಸಕಾಲ ಸೇವೆ ಕಲಬುರಗಿಗೆ ಪ್ರಥಮ ಸ್ಥಾನ

Fouzia Tarranum new
Published on

ಕಲಬುರಗಿ: ಕಾಲಮಿತಿಯಲ್ಲಿಯೇ ಸರ್ಕಾರಿ ಸೇವೆ ಒದಗಿಸುವ ಸಕಾಲ ಯೋಜನೆಯಡಿ ಕಳೆದ ಜುಲೈ ತಿಂಗಳಲ್ಲಿ ಅರ್ಜಿ ವಿಲೇವಾರಿಯಲ್ಲಿ ಕಲಬುರಗಿ ಜಿ¯್ಲÉ ರಾಜ್ಯದಲ್ಲಿಯೇ ಮೊದಲನೇ ಸ್ಥಾನ ಗಳಿಸಿದೆ ಎಂದು ಜಿ¯್ಲÁಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿz್ದÁರೆ.
ಜುಲೈನಲ್ಲಿ ಸಲ್ಲಿಕೆಯಾದ ೧,೫೮,೯೯೦ ಅರ್ಜಿಗಳಲ್ಲಿ ೧,೪೬,೦೮೮ ಅರ್ಜಿ ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗಿದೆ. ಮಾಸಾಂತ್ಯಕ್ಕೆ ೯೧೧ ಅರ್ಜಿ ಮಾತ್ರ ಬಾಕಿ ಉಳಿದುಕೊಂಡಿವೆ. ಕಾಲಮಿತಿಯಲ್ಲಿ ವಿಲೇವಾರಿಗೆ ಶೇ.೩೦, ವಿಳಂಬಕ್ಕೆ ಶೇ.೧೦, ತಿರಸ್ಕಾರಕ್ಕೆ ಶೇ.೧೦, ಒಂದು ಲP್ಷÀ ಜನಸಂಖ್ಯೆಗೆ ಸಲ್ಲಿಕೆಯಾದ ಅರ್ಜಿಗಳಿಗೆ ಶೇ.೩೦ ಹಾಗೂ ಬಾಕಿ ಅರ್ಜಿಗಳಿಗೆ ಶೇ.೨೦ ಅಂಕಗಳನ್ನು ನೀಡಿ ಒಟ್ಟಾರೆ ರ‍್ಯಾಂಕಿAಗ್ ತೆಗೆಯಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು, ಬೆಳಗಾವಿ ಹೊರತುಪಡಿಸಿದರೆ ಕಲಬುರಗಿ ಜಿ¯್ಲÉಯಲ್ಲಿ ಹೆಚ್ಚು ಅರ್ಜಿ ಸ್ವೀಕೃತಗೊಂಡಿದ್ದು, ವಿಲೇವಾರಿಯಲ್ಲಿಯೂ ಜಿ¯್ಲÉ ಮುಂದಿದೆ. ಜಿ¯್ಲÉಯ ಎಲ್ಲ ಇಲಾಖೆಗಳ ಅಧಿಕಾರಿ-ಸಿಬ್ಬಂದಿ ಪ್ರಯತ್ನದ ಫಲದಿಂದ ಜಿ¯್ಲÉ ರಾಜ್ಯದಲ್ಲಿಯೆ ಮೊದಲನೇ ಸ್ಥಾನದಲ್ಲಿದೆ. ಶ್ರಮಿಸಿದ ಎಲ್ಲ ಅಧಿಕಾರಿ-ಸಿಬ್ಬಂದಿಗೆ ಡಿಸಿ ಅಭಿನಂದನೆ ತಿಳಿಸಿದ್ದಾರೆ.
೫೯ ಸೇವೆ ನೀಡುವ ಸರ್ಕಾರದ ಮಾತೃ ಇಲಾಖೆಯಾದ ಕಂದಾಯ ಇಲಾಖೆಯು ಕಳೆದ ಆರು ತಿಂಗಳಿAದ ಅರ್ಜಿ ವಿಲೇವಾರಿಯಲ್ಲಿ ಸತತ ಪ್ರಥಮ ಸ್ಥಾನದಲ್ಲಿದೆ. ಜಾತಿ-ಆದಾಯ, ವಾಸಸ್ಥಳ, ೩೭೧ಜೆ ಮೀಸಲಾತಿ, ಸಿಂಧುತ್ವ, ಪಹಣಿ, ಮ್ಯುಟೇಷನ್, ಖಾತಾ, ಕೃಷಿಯೇತರ ಭೂಮಿ ಪರಿವರ್ತನೆ ಹೀಗೆ ಅನೇಕ ಸೇವೆ ಇಲಾಖೆ ಸಕಾಲನಡಿ ಕಾಲಮಿತಿಯಲ್ಲಿ ನೀಡುತ್ತಿದೆ ಎಂದು ಡಿಸಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net