ಸಕಾಲ ಯೋಜನೆಯಡಿ 26 ಸೇವೆ

RTO Office
Published on

ಬೀದರ್: ಸಾರಿಗೆ ಇಲಾಖೆಯಲ್ಲಿ 26 ಸೇವೆ ಸಕಾಲ ಯೋಜನೆಯಡಿ ತರಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಶಂಕರ ಹೇಳಿದರು.

ನಗರದ ಸಾರಿಗೆ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಕಾಲ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಕಲಿಕಾ ಚಾಲನಾ ಪತ್ರ, ಹೊಸ ನೋಂದಣಿ, ಮರು ನೋಂದಣಿ, ವಾಹನ ಮಾಲೀಕತ್ವ ಬದಲಾವಣೆ ಸೇರಿದಂತೆ 26 ಸೇವೆಗೆ ಸಕಾಲದಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸಿ ವಿಲೇವಾರಿ ಮಾಡಲಾಗುವುದು ಎಂದು ಹೇಳಿದರು.

ಮೋಟಾರು ವಾಹನ ನಿರೀಕ್ಷಕ ಪ್ರಸನ್ನ ಎಚ್. ಮಾತನಾಡಿ, ವಿವಿಧ ಸೇವೆ ಸಂಬಂಧ ಸಾರ್ವಜನಿಕರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ನಿಗದಿಯಾದ ದಿನಾಂಕದಂದು ಸರಿಯಾದ ಸಮಯಕ್ಕೆ ಕಚೇರಿಗೆ ಬಂದು ಕೆಲಸ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸಕಾಲ ನೋಡಲ್ ಅಧಿಕಾರಿ ಸತೀಶ ವಾಲೆ ಮಾತನಾಡಿ, ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸಕಾಲ ಸೇವೆ ಲಭ್ಯವಿದೆ ಎಂದರು. ಕಚೇರಿ ಅಧೀಕ್ಷಕ ಖಾಜಾ ಬಾಷಾ, ಶ್ರೀಕಾಂತ ಪಾಟೀಲ್, ಸಂಗೀತಾ ಬೆಮಳಗಿ, ಭಾಗ್ಯವಂತಿ ಮೋಟಾರ್ ಡ್ರೈವಿಂಗ್ ಸ್ಕೂಲ್ನ ಪ್ರಾಚಾರ್ಯ ಶಿವರಾಜ ಜಮಾದಾರ, ಪ್ರಕಾಶ ಗುಮ್ಮೆ, ವಿಶ್ವನಾಥ, ನಾಗೇಶ, ವೀರೇಂದ್ರ, ದಿನೇಶ ಪಾಂಚಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net