ಸಕಾರಾತ್ಮಕ ಚಿಂತನೆಗಾಗಿ ಪ್ರವಚನ ಆಲಿಸಿ

23kmr1
Published on

ಕಮಲನಗರ: ಜೀವನದಲ್ಲಿ ಅನೇಕ ದ್ವಂದ್ವಗಳಿವೆ. ಜೀವನ ಬೇಸರವಾಗುವಷ್ಟು ವಿಷಮ ಪರಿಸ್ಥಿತಿ ಎದುರಾಗುತ್ತವೆ. ವಚನಗಳ ಅಧ್ಯಯನದಿಂದ ಶರಣರ ದರ್ಶನ ಲಭಿಸುತ್ತದೆ. ಅಧ್ಯಾತ್ಮ ಮತ್ತು ಲೌಕಿಕಗಳ ಸಮನ್ವಯ ದರ್ಶನವಾಗುತ್ತದೆ. ನಕಾರಾತ್ಮಕ ಚಿಂತನೆಗಳನ್ನು ಹೋಗಲಾಡಿಸಿ, ಚೈತನ್ಯದ ಚಿಲುಮೆ ಹೊತ್ತಿಸುವುದೇ ಪ್ರವಚನದ ಉದ್ದೇಶ ಎಂದು ಮುಖಂಡ ಪ್ರಕಾಶ ಟೊಣ್ಣೆ ಹೇಳಿದರು.
ಪಟ್ಟಣದ ಡಾ.ಚನ್ನಬಸವ ಪಟ್ಟದ್ದೇವರ ಸ್ಮಾರಕ ಭವನದಲ್ಲಿ ಮಂಗಳವಾರ ಸಂಜೆ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡ ಒಂದು ತಿಂಗಳ ಶರಣರ ಜೀವನ ಶಾಂತ ಜೀವನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶರಣರ, ಸಂತರ, ದಾರ್ಶನಿಕರ ನುಡಿಗಳು ಕತ್ತಲ ಮನೆಗೆ ದೀವಟಿಗಳಂತೆ. ಶರಣರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಂದಾದೀಪದಂತೆ ನಮ್ಮ ಬದುಕನ್ನು ಬೆಳಗುತ್ತವೆ ಎಂದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಹೊಟ್ಟೆ ಹಸಿದವನಿಗೆ ಅನ್ನವನಿಕ್ಕುವವನು, ಬಾಯಾರಿದವನಿಗೆ ನೀರು ಕೊಡುವವನಲ್ಲಿ ದೇವರನ್ನು ಕಾಣಬೇಕು ಎಂದರು.
ಪ್ರವಚನಕಾರ ಬಸವಲಿಂಗ ಸ್ವಾಮೀಜಿ, ಪಿಡಿಒ ರಾಜಕುಮಾರ ತಂಬಾಕೆ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಶಿವಶರಣಪ್ಪ ಚಿಕಮುರ್ಗೆ, ವೈಜನಾಥ ಭವರಾ, ಚನ್ನಬಸವ ಘಾಳೆ, ಧನರಾಜ ಸೊಲ್ಲಾಪುರೆ, ಪ್ರಭುರಾವ ಬಿರಾದಾರ, ಪ್ರಕಾಶ ಸೊಲ್ಲಾಪುರೆ, ಅಮರ ಶಿವಣಕರ, ಹಾವಗಿ ಟೊಣ್ಣೆ, ಅವಿನಾಶ ಶಿವಣಕರ, ಸುರೇಶ ಸೊಲ್ಲಾಪುರೆ, ಜೀತೇಂದ್ರ ಮಹಾಜನ, ರಾಜಕುಮಾರ ಬಿರಾದಾರ, ಅಜಿತ್ ರಾಗಾ, ಸಂಗಪ್ಪ ಮಹಾಜನ, ಶಾಮರಾವ ಬಿರಾದಾರ ಇತರರಿದ್ದರು.
ನಾಗನಾಥ ಸ್ವಾಮಿ ಸ್ವಾಗತಿಸಿದರು. ಪ್ರಭುರಾವ ಕಳಸೆ ವಂದಿಸಿದರು. ಮಡಿವಾಳಪ್ಪ ಮಹಾಜನ ನಿರೂಪಣೆ ಮಾಡಿದರು. ಶಾಲಾ ಮಕ್ಕಳು ವಚನ ನೃತ್ಯ ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net