ಸಕಲ ಸುರಕ್ಷತೆ ಇರಲಿ

16..5
ಮುರಗೋಡ ಸಮೀಪದ ಇಂಚಲ ಶಿವಯೋಗೀಶ್ವರ ಮಠಕ್ಕೆ ಸಿಪಿಐ ವೌನೇಶ್ವರ ಮಾಲಿಪಾಟೀಲ ಭೇಟಿ ನೀಡಿ ಸುರಕ್ಷತೆ ಹಾಗೂ ಭದ್ರತೆ ಬಗ್ಗೆ ಶಿವಾನಂದ ಭಾರತಿ ಸ್ವಾಮೀಜಿ ಅವರೊಂದಿಗೆ ಚರ್ಚಿಸಿದರು.
Published on

ಮುರಗೋಡ: ಇಲ್ಲಿನ ಆರಕ್ಷಕ ಠಾಣೆ ವ್ಯಾಪ್ತಿಗೆ ಬರುವ ವಿವಿಧ ಮಠ, ದೇವಸ್ಥಾನ, ಚರ್ಚ್, ಮಸೀದಿಗಳಿಗೆ ಶುಕ್ರವಾರ ಸಿಪಿಐ ವೌನೇಶ್ವರ ಮಾಲಿಪಾಟೀಲ ಭೇಟಿ ನೀಡಿ ಸುರಕ್ಷತೆ ಹಾಗೂ ಭದ್ರತೆ ಬಗ್ಗೆ ಪರಿಶೀಲನೆ ನಡೆಸಿದರು. ಮುರಗೋಡ ವ್ಯಾಪ್ತಿಯ ಮುರಗೋಡದ ಮಹಾಂತ ದುರದುಂಡೇಶ್ವರ ಮಠ, ಕೆಂಗೇರಿ ಚಿದಂಬರೇಶ್ವರ ಮಠ, ಇಂಚಲದ ಶಿವಯೋಗೀಶ್ವರ ಮಠ, ಹೊಸೂರಿನ ಮಡಿವಾಳೇಶ್ವರ ಮಠ, ಯರಗಟ್ಟಿಯ ರಾಜರಾಜೇಶ್ವರಿ ಮಠ ಹಾಗೂ ವಿವಿಧ ಮಠ-ಮಂದಿರ, ಚರ್ಚ್, ಮಸೀದಿಗಳಿಗೆ ಭೇಟಿ ನೀಡಿ ಆಡಳಿತ ಮಂಡಳಿ ಹಾಗೂ ಮುಖ್ಯಸ್ಥರಿಗೆ ಸೂಕ್ತ ಭದ್ರತೆಗಾಗಿ ಸಿಸಿ ಕ್ಯಾಮರಾ ಹಾಗೂ ಸುರಕ್ಷತೆಗೆ ಬೇಕಾಗುವ ಸಕಲ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದರು. ಅಮಾಯಕರು ಹಾಗೂ ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net