ಸಕಲ ಸಿದ್ಧಿಗೆ ನಿತ್ಯ ಶಿವಯೋಗ ಸಹಕಾರಿ

CTD SHIVA YOAGA--00
Published on

ಚಿತ್ರದುರ್ಗ: ಸಾಧನೆಗೆ ಇಷ್ಟಲಿಂಗ ಪೂಜೆ ಬಹಳ ಮುಖ್ಯ. ಮನುಷ್ಯನ ಸಕಲ ಸಿದ್ಧಿಗೆ ನಿತ್ಯ ಶಿವಯೋಗ ನೆರವಾಗಲಿದೆ ಎಂದು ಗುರುಮಠಕಲ್ ಖಾಸಾ ಶ್ರೀ ಮುರುಘಾಮಠದ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಶ್ರೀ ಹೇಳಿದರು.
ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವ ಹಾಗೂ ಶ್ರೀ ಜಯದೇವ ಶ್ರೀಗಳ 150 ನೇ ಜಯಂತ್ಯುತ್ಸದ ಮೊದಲ ದಿನ ಶನಿವಾರ ಅನುಭವ ಮಂಟಪದಲ್ಲಿ ಏರ್ಪಡಿಸಿದ್ದ ಸಹಜ ಶಿವಯೋಗ ಕಾರ‌್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಹಸಿವಿಗೆ ಆಹಾರ ಹೇಗೆ ಮುಖ್ಯವೋ, ಹಾಗೆಯೇ ಆತ್ಮದ ಹಸಿವು ನೀಗಿಸಲು ಶಿವಯೋಗ ಮುಖ್ಯ. ಸಾಧನೆಯ ಮೆಟ್ಟಿಲು ಏರಲು, ಏಕಾಗ್ರತೆ, ಯಶಸ್ಸಿಗೆ, ಒಳ್ಳೆಯ ಆಲೋಚನೆ ಬೆಳೆಸಿಕೊಳ್ಳಲು ನೆರವಾಗುವ ಶಿವಯೋಗಕ್ಕಾಗಿ ಬಸವಣ್ಣ ನಮಗೆ ಇಷ್ಟಲಿಂಗ ಕೊಟ್ಟಿದ್ದಾರೆ ಎಂದರು.
ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಶ್ರೀ , ಮೋಕ್ಷಪತಿ ಶ್ರೀ, ಶಿವಾನಂದ ಶ್ರೀ, ಬಸವ ಶಾಂತಲಿಂಗಶ್ರೀ, ಬಸವಭೂಷಣ ಶ್ರೀ , ಬಸವಪ್ರಭು ಶ್ರೀ ಸಾನ್ನಿಧ್ಯ ವಹಿಸಿದ್ದರು. ಶಿಗ್ಗಾವಿ ಸಮಾಜಸೇವಕ ಡಿ.ಎಸ್. ಮಾಳಗಿ ಇದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net