ಸಂಸ್ಥಾಪನಾ ದಿನಾಚರಣೆ

24 mlv 2
ಶಿವನ ಸಮುದ್ರದಲ್ಲಿರುವ ಕರ್ನಾಟಕ ವಿದ್ಯುತ್ ನಿಗಮದ ಸೌರಶಕ್ತಿ ವಿದ್ಯುತ್ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತಿ ಹೊಂದಿದ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್.ಬಿ.ಜಯಣ್ಣ ಅವರನ್ನು ಸನ್ಮಾನಿಸಲಾಯಿತು. ನವೀನ್ ಕುಮಾರ್, ಬಿ.ಕೆ.ಅರವಿಂದ್, ವೆಂಕಟೇಶ್ ಗೌಡ ಇದ್ದರು.
Published on

ಮಳವಳ್ಳಿ: ತಾಲೂಕಿನ ಶಿವನ ಸಮುದ್ರದಲ್ಲಿರುವ ಕರ್ನಾಟಕ ವಿದ್ಯುತ್ ನಿಗಮದ ಸೌರಶಕ್ತಿ ವಿದ್ಯುತ್ ಕೇಂದ್ರದ ಸಭಾಂಗಣದಲ್ಲಿ ಸೋಮವಾರ ನಿಗಮದ 54ನೇ ಸಂಸ್ಥಾಪನಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಶಿವಾ ಹಾಗೂ ಶಿಂಷಾ ಜಲ ವಿದ್ಯುತ್ ಕೇಂದ್ರದ ಯೋಜನಾ ಮುಖ್ಯಸ್ಥ ನವೀನ್ ಕುಮಾರ್ ಮಾತನಾಡಿ, ಇಂದಿನ ತಂತ್ರಜ್ಞಾನದ ಯುಗದಲ್ಲಿ ಯಾವುದೇ ಯೂನಿಟ್‌ನಲ್ಲಿ ಯಾವ ರೀತಿಯ ಯಂತ್ರೋಪಕರಣ ಹಾಗೂ ಉತ್ಪಾದನಾ ಸಾಮರ್ಥ್ಯಗಳು ನಿರ್ವಹಣೆ ಮಾಡುತ್ತಿವೆ ಎಂಬ ಎಲ್ಲ ಮಾಹಿತಿ ಅಂಗೈಯಲ್ಲೇ ಸಿಗುತ್ತಿವೆ. ಸಿಬ್ಬಂದಿಯ ಸಮರ್ಥ ಕಾರ್ಯಗಳಿಂದ ನಮ್ಮ ಕೇಂದ್ರ ಅಚ್ಚುಕಟ್ಟಾಗಿ ನಡೆದುಕೊಂಡು ಹೋಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಾದ ಎಚ್.ಬಿ.ಜಯಣ್ಣ, ಎನ್. ಸ್ವಾಮಿ, ರವರನ್ನು ಅಭಿನಂದಿಸಲಾಯಿತು. ಇಂಜಿನಿಯರ್‌ಗಳಾದ ಬಿ.ಕೆ.ಅರವಿಂದ್, ಗೀತಾಬಾಯಿ, ಆಶಾ, ಅರವಿಂದ, ವೆಂಕಟೇಶ್‌ಗೌಡ, ಸಿಬಂದಿ ನೇಹಾನೆಲ್ಲೂರ, ನವೀನ್ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net