

ಬಸವಕಲ್ಯಾಣ: ದೇಶದ ಸಾಂಸ್ಕೃತಿಕ ಅಂತಃಸತ್ವ ಹೆಚ್ಚಿಸುವಲ್ಲಿ ಜಾತ್ರೆಗಳು ತಮ್ಮದೇ ಆದ ವಿಶಿಷ್ಟ ಪಾತ್ರ ವಹಿಸುತ್ತವೆ. ಜಾತ್ರೆಗಳು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ ಎಂದು ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಹೇಳಿದರು.
ಕೋಹಿನೂರದ ಶ್ರೀ ಸದ್ಗುರು ಚನ್ನಮಲ್ಲೇ ಶ್ವರ ಜಾತ್ರೆಯ ಪಲ್ಲಕ್ಕಿ ಉತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿ, ಭಕ್ತರ ಬಾಳಿಗೆ ಬೆಳಕಾಗಿ ನಿಂತು, ಹಲವು ಪವಾಡಗಳನ್ನು ಸೃಷ್ಟಿಸಿದ ಕೋಹಿನೂರ ಚನ್ನಮಲ್ಲೇಶ್ವರರು ಇವತ್ತಿಗೂ ನಂಬಿದ ಭಕ್ತರ ಭಾಗ್ಯದಾತರಾಗಿ ಆಶೀರ್ವದಿಸುತ್ತಿದ್ದಾರೆ. ಅವರ ಚೈತನ್ಯ ಶಕ್ತಿ ಅಮರವಾಗಿದ್ದು, ದೈವ ಸನ್ನಿಧಿಯಲ್ಲಿ ಸಮರ್ಪಣಾ ಭಾವದಿಂದ ಸೇವೆಗೈದವರಿಗೆ ಶಿವನ ಕೃಪೆ ದೊರೆಯುತ್ತದೆ ಎಂದರು.
ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಪಿ. ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರಾಜಶ್ರೀ ಹಿತವಂತ, ಪ್ರಮುಖರಾದ ಮಲ್ಲಿನಾಥ ಹಿರೇಮಠ ಹಾರಕೂಡ, ವೀರಣ್ಣ ಮೂಲೆಗೆ, ಶಿವಾನಂದ ಪಾಟೀಲ್, ಅಪ್ಪಣ್ಣ ಜನವಾಡ, ಕಾರ್ತಿಕಯ್ಯ ಸ್ವಾಮಿ, ಆನಂದ ಪಾಟೀಲ್, ಶಿವ ಕಲೋಜಿ, ನರಸಪ್ಪ ನಾಯಕ, ಶಿವಶರಣಪ್ಪ ಸಂತಾಜಿ, ಸಂತೋಷ ಲಾಡವಂತಿ, ಅನೀಲ ಮಣಕೋಜಿ, ಶಿವಕುಮಾರ ಪಾಟೀಲ್, ಧನರಾಜ ಲೋಖಂಡೆ, ಸಿದ್ದರಾಮ ಮಣಮು, ಸೋಮಣ್ಣ ಕಲೋಜಿ, ಚಂದ್ರಕಾಂತ ಮನೋಳೆ, ದೇವಿದಾಸ ಸಜ್ಜನ, ಕೃಷ್ಣ ಇತರರಿದ್ದರು.
ಅಂಬಾರಾಯ ಉಗಾಜಿ ಸ್ವಾಗತಿಸಿದರು. ಕರಬಸಯ್ಯ ಸ್ವಾಮಿ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಹಡಪದ ನಿರೂಪಣೆ ಮಾಡಿದರು. ಸಹಸ್ರಾರು ಭಕ್ತರ ಜೈಘೋಷ, ಭಜನೆ ಹಾಗೂ ವಾದ್ಯ ವೈಭವಗಳೊಂದಿಗೆ ಪಲ್ಲಕ್ಕಿ ಮೆರವಣಿಗೆ ಜರುಗಿತು. ಜಾತ್ರೆ ನಿಮಿತ್ತ ಕಲಬುರಗಿಯ ಅಕ್ಕಮಹಾದೇವಿ ಆಶ್ರಮದ ಪೂಜ್ಯ ಪ್ರಭುಶ್ರೀ ಮಾತಾಜಿ ಅವರಿಂದ ಪ್ರವಚನ ನಡೆಯಿತು.