ಸಂಸ್ಕೃತಿ,ಪರಂಪರೆ ಪರಿಚಯಿಸುವ ಶಿಕ್ಷಣ ಬೇಕು

CTD 23 VIDAYA--05
Published on

ಚಿತ್ರದುರ್ಗ: ನಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿ,ಪರಂಪರೆ ಪರಿಚಯಿಸುವಂತಹ ನೈತಿಕ ಶಿಕ್ಷಣದ ಅಗತ್ಯವಿದೆ ಎಂದು ಪಾವಗಡ ಶ್ರೀ ರಾಮಕೃ ಷ್ಣಾನಂದಾಶ್ರಮದ ಶ್ರೀ ಜಪಾನಂದ ಸ್ವಾಮೀಜಿ ಹೇಳಿದರು.

ನಗರದ ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಶುಕ್ರವಾರ ವಿದ್ಯಾರಂಭ ಮತ್ತು ಅಕ್ಷರ ಭ್ಯಾಸ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವ ರು,ಭಾರತೀಯ ಸಂಸ್ಕೃತಿ,ಪರಂಪರೆ ಪರಿಚಯಿಸುವ ಜ್ಞಾನ ಭಾರತಿಯಂಥ ಶಾ ಲೆಗಳು ಪ್ರತಿ ಹಳ್ಳಿಗಳಲ್ಲೂ ಸ್ಥಾಪಿಸ ಬೇಕಾದ ಅಗತ್ಯವಿದೆ. ಐದು ಸಾವಿರ ವರ್ಷಗಳ

ಹಿಂದೆಯೇ ನಮ್ಮ ದೇಶದಲ್ಲಿ ವಿದ್ಯಾರಂಭ,ಅಕ್ಷರಭ್ಯಾ ಸದ ಆಚರಣೆ ಇತ್ತು. ಬದಲಾದ ಕಾಲಘಟ್ಟದಲ್ಲಿ ಈ ಕಾರ‌್ಯ ಕ್ರಮಗಳು ತೆರೆಮರೆಗೆ ಸರಿದಿದ್ದವೆಂದರು.
ಶಾಲೆ ಕಾರ‌್ಯದರ್ಶಿ ಡಾ.ಕೆ.ರಾಜೀವಲೋಚನ ಮಾತನಾಡಿ,ರಾಷ್ಟ್ರೋತ್ಥಾನದೆ ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ಹಾಗೂ ವಿದ್ಯಾರಂಭ ಕಾರ‌್ಯಕ್ರ ಮಗಳನ್ನು ಏರ್ಪಡಿಸಿಕೊಂಡು ಬರಲಾಗುತ್ತಿದೆ.

ಹಿಂದು ಧರ್ಮದಲ್ಲಿ ಅಕ್ಷರಭ್ಯಾಸ,ವಿದ್ಯಾರಂಭಕ್ಕೆ ಮಹತ್ವವಿದೆ. ನಮ್ಮ ಶಾಲೆಯಲ್ಲಿ ಭಾರತೀಯ ಪರಂಪರೆ ಜತೆಗೆ ಮಕ್ಕಳ ಸರ್ವಾಂಗೀಣ ವಿಕಾಸದೊಂದಿಗೆ ಪರಿಪೂರ್ಣ ವ್ಯಕ್ತಿಗಳನ್ನಾಗಿ ರೂಪಿಸಲು ಪಂಚ ಮುಖಿ ಶಿಕ್ಷಣವನ್ನು ಅಳವಡಿಸಿಕೊಳ್ಳಲಾಗಿದೆ ಎಂದರು. ಬೋಧಕ,ಬೋಧಕೇತರ ಸಿಬ್ಬಂದಿ,ಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net