ಸಂಸ್ಕೃತಿ ಮರೆತರೆ ದೇಶದ ಅಧಃಪತನ

31kmr1
 ಕಮಲನಗರದ ಮಹಾರಾಷ್ಟ್ರ ಗಡಿಯಲ್ಲಿ ಶುಕ್ರವಾರ ನಾಣೇಜಧಾಮದ ನರೇಂದ್ರಚಾರ್ಯ ಮಹಾರಾಜರ ಪಾದುಕೆ ದರ್ಶನದಲ್ಲಿ ಭಕ್ತರು ಪಾಲ್ಗೊಂಡು ಪೂಜೆ ಸಲ್ಲಿಸಿದರು. ಪ್ರವಚನಕಾರ ಪಾಂಡುರಂಗ ಪಾಟೀಲ್, ವಿಠಲ ಮುಳೆ, ದಿಲೀಪ ಮುಧಾಳೆ ಇತರರಿದ್ದರು.
Published on

ಕಮಲನಗರ: ಸನಾತನ ಧರ್ಮ ಜಗತ್ತಿನಲ್ಲಿ ಶ್ರೇಷ್ಠ ಧರ್ಮವಾಗಿದೆ. ಇದು ಎಲ್ಲರೂ ಒಟ್ಟಾಗಿ ಸಾಮರಸ್ಯದಿಂದ ಬದುಕಬೇಕು ಮತ್ತು ಇಡೀ ಸೃಷ್ಟಿಯ ಒಳಿತನ್ನು ಬಯಸುತ್ತದೆ. ಇಂದಿನ ಪೀಳಿಗೆ ನಮ್ಮ ಸಂಸ್ಕೃತಿ, ಪರಂಪರೆ ಮರೆತರೆ ದೇಶವೇ ಅಧಃಪತನದತ್ತ ಸಾಗುವುದು ನಿಶ್ವಿತ ಎಂದು ಪ್ರವಚನಕಾರ ಪಾಂಡುರಂಗ ಪಾಟೀಲ್ ಹೇಳಿದರು.

ಪಟ್ಟಣದಲ್ಲಿ ಮಹಾರಾಷ್ಟ್ರದ ನಾಣೇಜಧಾಮದ ನರೇಂದ್ರಚಾರ್ಯ ಮಹಾರಾಜರ ಪಾದುಕೆ ದರ್ಶನ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಕ್ತಿಯಿಂದ ಪರೋಪಕಾರ, ಮಾನವೀಯತೆ ಹಾಗೂ ಸದ್ಗುಣಗಳು ಅರಳುವವು, ಹೀಗಾಗಿ ನಮ್ಮ ಮನಸ್ಸು ಹಾಗೂ ಇಂದ್ರೀಯಗಳನ್ನು ಅಧ್ಯಾತ್ಮದತ್ತ ಒಲವು ಬೆಳೆಸಿಕೊಳ್ಳಬೇಕು ಎಂದರು.

ಸ್ವ ಸ್ವರೂಪ ಸಂಪ್ರದಾಯ ಬೀದರ್ ಜಿಲ್ಲಾ ಸೇವಾ ಸಮಿತಿ ಜಿಲ್ಲಾ ನಿರೀಕ್ಷಕ ವಿಠಲ ಮುಳೆ ಮಾತನಾಡಿ, ಅಂಧಶ್ರದ್ಧೆ ಮನುಷ್ಯನನ್ನು ಅಜ್ಞಾನ ದತ್ತ ಕರೆದುಕೊಂಡು ಹೋಗುತ್ತದೆ. ಅಧ್ಯಾತ್ಮ, ಯೋಗ, ಜ್ಞಾನಗಳು ಸನ್ಮಾರ್ಗದತ್ತ ಕರೆದುಕೊಂಡು ಹೋಗಲಿವೆ. ನರೇಂದ್ರಾಚಾರ್ಯ ಸ್ವಾಮೀಜಿ ಅವರ ಅಧ್ಯಾತ್ಮ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.

ಜಿಲ್ಲಾ ಅಧ್ಯಕ್ಷ ಶ್ರೀಪಾದ ಕಪ್ಪಿಕೇರೆ ಮಾತನಾಡಿದರು. ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಅಶೋಕ ಪಾಟೀಲ್, ಕಾರ್ಯಕ್ರಮದ ಸಂಯೋಜಕ ಸಂಜೀವ ಟೆಕೊಳೆ, ತಾಲೂಕು ಅಧ್ಯಕ್ಷ ಧನರಾಜ ಬೋರಕರ್, ವೈಜಿನಾಥ ಗುಡ್ಡಾ, ರವಿ ಪಟ್ನೆ, ಬಾಲಾಜಿ ನಾಗಂಪಲ್ಲಿ, ಧನಾಜಿ ನಾಗಂಪಲ್ಲಿ, ನವನಾಥ ಶ್ರೀಗಿರೆ, ಜ್ಞಾನೋಬಾ ಟಾಳೆ, ಸಂಜೀವ ಖೊಂಡೆ, ಜಯಶ್ರೀ ಮುಧಾಳೆ, ಜೀವನಲತಾ ಪಾಟೀಲ್, ಅಕ್ಷತಾ ಮುಧಾಳೆ, ಸುಶೀಲ್ ಪಾಟೀಲ್ ಇತರರಿದ್ದರು.

ನೆರೆಯ ಮಹಾರಾಷ್ಟç, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯದ ವಿವಿಧೆಡೆಯಿಂದ ಭಕ್ತರು ಈ ಪಾದುಕೆ ದರ್ಶನದಲ್ಲಿ ಸಮ್ಮಿಲನಗೊಂಡಿರುವದು ವಿಶೇಷವಾಗಿತ್ತು. ಸುಮಾರು ೧೨ ಸಾವಿರ ಜನ ಭಕ್ತರು ಪಾಲ್ಗೊಂಡಿದ್ದರು. ಭಕ್ತರಿಗಾಗಿ ಪ್ರಸಾದ ದಾಸೋಹವನ್ನು ನಾಗರಿಕ ಸೇವಾ ಸಮಿತಿ ಅಧ್ಯಕ್ಷ ದಿಲೀಪ ಮುಧಾಳೆ ಕೈಗೊಂಡಿದ್ದರು.

ಅದ್ದೂರಿ ಮೆರವಣಿಗೆ: ನರೇಂದ್ರಚಾರ್ಯ ಮಹಾರಾಜರ ಪಾದುಕೆ ದರ್ಶನ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ಸಮುದಾಯ ಆರೋಗ್ಯ ಕೇಂದ್ರದಿಂದ ಆರಂಭವಾದ ಮೆರವಣಿಗೆಯು ಅಲ್ಲಮಪ್ರಭು ವೃತ್ತ, ಶನಿದೇವ ಮಂದಿರ ಮಾರ್ಗವಾಗಿ ಮಹಾರಾಷ್ಟ್ರದ ಗಡಿವರೆಗೆ ಸಾಗಿತು. ಮಹಿಳೆಯರು ನೃತ್ಯ, ಹರಿಭಜನೆ, ಡೊಳ್ಳು ಕುಣಿತ ಮತ್ತಿತರ ವಾದ್ಯಗಳ ಸಡಗರವು ಮೆರವಣಿಗೆಗೆ ಕಳೆ ಕಟ್ಟಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net