ಸಂಸ್ಕೃತಿ, ಕಲೆ, ಸಾಹಿತ್ಯ ಉಳಿಸುವ ಕಾರ್ಯಕ್ರಮಗಳಾಗಲಿ: ಎಚ್.ವಿಶ್ವನಾಥ್

12
Published on

ಮೈಸೂರು:  ನಮ್ಮ ಸಂಸ್ಕೃತಿ, ಕಲೆ, ಸಾಹಿತ್ಯ ಉಳಿಸುವಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂದು ವಿಧಾನ ಪರಿಷತ್ತಿನ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.

ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (ಎನ್‌ಎಸ್‌ಸಿಡಿಎಫ್)ದಿಂದ ನಗರದ ಪುರಭವನದಲ್ಲಿ ಶನಿವಾರ ಅಯೋಜಿಸಿದ್ದ ಕೆ.ಎಸ್.ನ. ಮಲ್ಲಿಗೆಕಂಪು ವಿಚಾರಗೋಷ್ಠಿ, ಕವಿಗೋಷ್ಠಿ, ಪ್ರಶಸ್ತಿ ಪ್ರದಾನ, ಗೀತ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸಂಸ್ಕೃತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಆಗಬೇಕಿದೆ. ಇತ್ತೀಚಿನ ಪ್ರಶಸ್ತಿಗಳು ಸಹ ಶಿಫಾರಸಿನ ಮೇಲೆ ನೀಡಲಾಗುತ್ತಿದೆ. ಆದರೆ, ಇದ್ಯಾವುದೂ ಇಲ್ಲದೆ ನಿಜವಾದ ಸಮಾಜಸೇವಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಅಯೂಬ್ ಅಹಮದ್, ಆರ್.ಯಶೋದಾ ಮೈಸೂರು, ಜಿ.ಜಯಂತ್, ಡಾ.ಎಚ್.ಪಿ.ರಾಣಿಪ್ರಭಾ, ಡಾ.ಪಳನಿಸ್ವಾಮಿ ಅವರನ್ನು ಅಭಿನಂದಿಸಲಾಯಿತು. ವಿವಿಧ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಎನ್‌ಎಸ್‌ಸಿಡಿಎಫ್ ಅಧ್ಯಕ್ಷ ಗಂಗಾಧರ್ ಗಾಂಧಿ, ಮೈಸೂರು ವಿವಿ ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮೀ ಮನಾಪುರ, ಲೇಖಕ ಕೆ.ವಿ.ಲಕ್ಷ್ಮಣಮೂರ್ತಿ, ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಲೇಖಕ ಕೆ.ಎನ್.ಮಹಾಬಲ, ಕೆಎಸ್‌ಎಸ್‌ಎಪಿ ಅಧ್ಯಕ್ಷ ರಾಣಿ ಪುಷ್ಪಲತಾ ದೇವಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net