ಸಂಸ್ಕೃತ ಭಾಷೆ ಕೇವಲ ಅಂಕ ಗಳಿಕೆಗೆ ಮೀಸಲಾಗದಿರಲಿ

Sanskrit language should not be reserved for marks only
ಗೊಳಸಂಗಿ ಸಮೀಪದ ಕೂಡಗಿ ಎನ್‌ಟಿಪಿಸಿ ಬಾಲಭಾರತಿ ಪಬ್ಲಿಕ್ ಸ್ಕೂಲ್‌ನಲ್ಲಿ ಸಂಸ್ಕೃತ ದಿನ ಕಾರ್ಯಕ್ರಮ ನಿಮಿತ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.
Published on

ಗೊಳಸಂಗಿ: ಸಂಸ್ಕೃತ ಭಾಷೆಯನ್ನು ಇಂದು ವಿದೇಶಿಗರು ಕಲಿಯುತ್ತಿದ್ದು, ಭಾರತೀಯರಾದ ನಾವು ಎಚ್ಚರಗೊಳ್ಳುವ ಅನಿವಾರ್ಯತೆಯಿದೆ. ಸಂಸ್ಕೃತ ಭಾಷೆಯನ್ನು ಬರಿ ಅಂಕ ಗಳಿಕೆಗೆ ಇರುವ ಒಂದು ಪಠ್ಯವೆಂದು ಭಾವಿಸದೇ ಇದನ್ನು ದೇವರ ಭಾಷೆ ಎಂದರಿತು ಉಳಿಸಿ ಬೆಳೆಸುವತ್ತ ಸಾಮೂಹಿಕ ಪ್ರಯತ್ನ ಆಗಬೇಕಿದೆ ಎಂದು ಸಂಸ್ಕೃತ ವಿಭಾಗದ ಮುಖ್ಯಸ್ಥ ಅಭಿಜಿತ ನೇಚಕರ ಹೇಳಿದರು.

ಸಮೀಪದ ಕೂಡಗಿ ಎನ್‌ಟಿಪಿಸಿ ಬಾಲಭಾರತಿ ಪಬ್ಲಿಕ್ ಸ್ಕೂಲ್‌ನಲ್ಲಿ ಗುರುವಾರ ಜರುಗಿದ ಸಂಸ್ಕೃತ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ನೂತನ ಶಿಕ್ಷಣ ನೀತಿಯಲ್ಲಿ ಸಂಸ್ಕೃತ ಭಾಷೆಯನ್ನು ಮಕ್ಕಳಿಗೆ ಕಲಿಯುವ ಅವಕಾಶ ಲಭ್ಯವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಪ್ರಾಂಶುಪಾಲ ಸಂದೀಪ ಸೋಮಸೋಲೆ ಮಾತನಾಡಿ, ಹಳೆಬೇರು, ಹೊಸಚಿಗುರು ಎಂಬಂತೆ ಆಧುನಿಕ ಶೈಕ್ಷಣಿಕ ಪದ್ಧತಿಯ ನಾಗಾಲೋಟದಲ್ಲಿ ನಶಿಸಿ ಹೋಗುತ್ತಿದ್ದ ಸಂಸ್ಕೃತ ಭಾಷೆಯನ್ನು ಮತ್ತೇ ಪಠಣ ಮಾಡುವಂತಾಗಿರುವುದು ಅಭಿಮಾನದ ಸಂಗತಿಯಾಗಿದೆ ಎಂದರು.

ಸಂಸ್ಕೃತ ದಿನದ ನಿಮಿತ್ತವಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗಾಗಿ ಕೈಬರಹ, ರಸಪ್ರಶ್ನೆ, ಶ್ಲೋಕ ಪಠಣ, ಭಾಷಣ ಮೊದಲಾದ ಸ್ಪರ್ಧಾ ಚಟುವಟಿಕೆಗಳನ್ನು ಏರ್ಪಡಿಸಿ ವಿಜೇತರಿಗೆ ಸೂಕ್ತ ಬಹುಮಾನ ನೀಡಲಾಯಿತು. ಸರಸ್ವತಿ ದೇವಿಯ ಶ್ಲೋಕ ಮತ್ತು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮವು ಸಂಸ್ಕೃತ ಭಾಷೆಯಲ್ಲಿಯೇ ಜರುಗಿದ್ದು ವಿಶೇಷವಾಗಿತ್ತು.

ಶಿಕ್ಷಕರಾದ ಕೀರ್ತಿ ಪಾಟೀಲ, ಅಜೀತ ಕಾವಟೇಕರ, ಸರನ್ಯಾ ಎಸ್., ಶ್ರೀದೇವಿ ಎಚ್., ನವನೀತ ತ್ರಿಪಾಠಿ, ಸ್ವಾತಿ ಮೋರೆ, ರಾಜಶ್ರೀ ಜೋಶಿ, ಕವಿತಾ ಚಕ್ರವರ್ತಿ, ತುಳಜಾರಾಮ ಸುಕ್ತೆ ಸೇರಿದಂತೆ ಹಲವಾರು ಶಿಕ್ಷಕರು, ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net