ಸಂಸ್ಕೃತ ಭಾಷೆ ಕಲಿಕೆಯಿಂದ ಜ್ಞಾನ ವೃದ್ಧಿ : ಶಿಕ್ಷಕ ಮಹದೇವಪ್ಪ ಅಭಿಪ್ರಾಯ

31 HANUR 2
Published on

ಚಾಮರಾಜನಗರ : ಸಂಸ್ಕೃತ ಭಾಷೆ ಕಲಿಯುವುದರಿಂದ ಜ್ಞಾನ ವೃದ್ಧಿಸುವುದರ ಜತೆಗೆ ತೊದಲಿಕೆ ನಿವಾರಣೆಯಾಗುತ್ತದೆ ಎಂದು ಶಿಕ್ಷಕ ಮಹದೇವಪ್ಪ ತಿಳಿಸಿದರು.


ವಿಶ್ವ ಸಂಸ್ಕೃತ ದಿನಾಚರಣೆ ಅಂಗವಾಗಿ ಹನೂರು ತಾಲೂಕಿನ ಶಾಗ್ಯ ಗ್ರಾಮದ ಫಲಹಾರ ಪ್ರಭುದೇವಸ್ವಾಮಿ ಸಂಸ್ಕೃತ ಪಾಠಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಸಂಸ್ಕೃತ ಭಾಷೆ ಧಾರ್ಮಿಕ ತಳಹದಿ ಹೊಂದಿದ್ದು, ಇದರಲ್ಲಿ ಋಷಿ, ಮುನಿಗಳ ಕೊಡುಗೆ ಅಪಾರ. ಸಂಸ್ಕೃತ ಇತರ ಭಾಷೆ ಕಲಿಕೆಗೆ ಸಹಕಾರಿಯಾಗಿದೆ. ಅಲ್ಲದೇ ಜೀವನದಲ್ಲಿ ಶಿಸ್ತುಬದ್ಧತೆ ಹಾಗೂ ಶಿಷ್ಟಾಚಾರವನ್ನು ಕಲಿಸುತ್ತದೆ. ಹಾಗಾಗಿ ಸಂಸ್ಕೃತ ಭಾಷೆ ಕಲಿಯುವುದು ಉತ್ತಮ ಎಂದು ತಿಳಿಸಿದರು.
ಶಿಕ್ಷಕರಾದ ಮಲ್ಲೇಶ್, ಪರಶಿವಮೂರ್ತಿ, ಜೋಸ್ಟಿನ್ ಮೇರಿ, ಜಯಮ್ಮ, ಶಂಕರ್, ಪ್ರೇಮಾ, ಮಂಜುನಾಥ್, ರಾಧಾ ಅನುಪಮಾ, ಜ್ಯೋತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net