ಸಂಸ್ಕೃತ ಎಲ್ಲ ಭಾಷೆಗಳ ತಾಯಿ

h6-Vachanam 1
Published on

ಹುಬ್ಬಳ್ಳಿ: ಜಗತ್ತಿನ ಅನೇಕ ಭಾಷೆಗಳಿಗೆ ಸಂಸ್ಕೃತದ ನಂಟಿದೆ. ಸಂಸ್ಕೃತ ಭಾಷೆ ಎಲ್ಲ ಭಾಷೆಗಳ ತಾಯಿ ಇದ್ದಂತೆ ಎಂದು ವಿಆರ್​ಎಲ್ ಸಂಸ್ಥೆಯ ಕಾನೂನು ಸಲಹೆಗಾರ ಆರ್.ಬಿ. ಗದಗಕರ ಅಭಿಪ್ರಾಯಪಟ್ಟರು.

ಸಂಸ್ಕೃತ ಭಾರತೀ ವತಿಯಿಂದ ಇಲ್ಲಿನ ಗೋಕುಲ ರಸ್ತೆಯ ವಚನಮ್ ಕಾರ್ಯಾಲಯದಲ್ಲಿ ಸಂಸ್ಕೃತ ಸಂಭಾಷಣೆ ಶಿಬಿರದ ಸಮಾರೋಪ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂಸ್ಕೃತ ಭಾಷೆಯನ್ನು ಒಮ್ಮೆ ಕಲಿತರೆ ಅಷ್ಟು ಸುಲಭವಾಗಿ ಬಿಡಲು ಆಗುವುದಿಲ್ಲ. ನಮ್ಮೊಳಗೆ ಅದು ಬೆರೆತರೆ ಜೀವನಶೈಲಿಯೇ ವಿಶೇಷವಾಗಿರುತ್ತದೆ. ಸಂಸ್ಕೃತದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಉತ್ತರ ಕರ್ನಾಟಕದಲ್ಲಿ ಸಂಸ್ಕೃತ ಭಾರತೀ ಸಂಸ್ಥೆ ಆರಂಭವಾಗಿ ಕೆಲವೇ ದಿನದಲ್ಲಿ ಮೊದಲ ಶಿಬಿರ ಮುಕ್ತಾಯಗೊಳಿಸಿರುವುದು ಸಂತಸದ ವಿಷಯ. ಸಂಸ್ಕೃತ ಕಲಿಕೆಗೆ ಸದಾ ನಮ್ಮ ಸಹಕಾರ ಇರುತ್ತದೆ ಎಂದರು.

ಅಕ್ಷಯ ಆಗ್ರೋ ಎಂ.ಡಿ. ಶ್ರೀಪಾದ ಹೆರ್ಲೆಕರ ಮಾತನಾಡಿ, ಯಾವುದೇ ಭಾಷೆಯನ್ನಾಗಲಿ, ಆಸಕ್ತಿಯಿಂದ ಕಲಿತರೆ ಬಹುಬೇಗ ಕಲಿಯಬಹುದು. ಶ್ರೀಮಂತ ಭಾಷೆಯಾದ ಸಂಸ್ಕೃತದ ಬಗ್ಗೆ ಬಹಳ ಹೆಮ್ಮೆ ಇದೆ. ಸಂಸ್ಕೃತ ಕಲಿಯುವುದು ಅದೃಷ್ಟದ ಕೆಲಸ ಎಂದರು. ಸಂಸ್ಕೃತ ಭಾರತೀ ಉತ್ತರ ಕರ್ನಾಟಕ ಸಂಘಟನಾ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಪ್ರಚಾರ ಪ್ರಮುಖ ವಿನಯ ನಾಯಕ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net