ಸಂಸ್ಕಾರಯುತ ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯ

Kannada Bhavan
Published on

ಕಲಬುರಗಿ: ಸಂಸ್ಕಾರಯುತ ಶಿಕ್ಷಣದಿಂದ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.

ನಗರದ ಕನ್ನಡ ಭವನದಲ್ಲಿ ೨೦೨೨-೨೩ರ ಎಸ್ಸೆಸ್ಸೆಲ್ಸಿ/ಪಿಯುಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಅಲೆಮಾರಿ ಹೆಳವ ಸಮುದಾಯದ ವಿದ್ಯಾರ್ಥಿಗಳಿಗೆ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿದ ಅವರು, ಅತಿ ಹಿಂದುಳಿದ ಅಲೆಮಾರಿ ಹೆಳವ ಸಮಾಜವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವ ಅಗತ್ಯವಿದೆ. ಆಸ್ತಿಗಾಗಿ ದುಡಿಯುವುದಕ್ಕಿಂತ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ನಗರದಲ್ಲಿ ಹೆಳವ ಸಮಾಜ ಸಮುದಾಯ ಭವನ ನಿರ್ಮಿಸಲು ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಅಲೆಮಾರಿ ಹೆಳವ ಸಮಾಜ ಅತಿ ಸಣ್ಣ ಹಾಗೂ ಕಡುಬಡತನದಿಂದ ಕೂಡಿದ್ದರೂ ಮಕ್ಕಳ ಸಾಧನೆ ಶ್ಲಾಘನೀಯ. ಸಮಾಜದ ಏಳಿಗೆಗಾಗಿ ತಮ್ಮ ಅನುದಾನದಿಂದ ೫ ಲಕ್ಷ ರೂ. ನೀಡುವುದಾಗಿ ಘೋಷಿಸಿದರು.

ಶ್ರೀ ಶಂಕರಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಿದ್ದರು.
ಸಮಾಜದ ಜಿಲ್ಲಾಧ್ಯಕ್ಷ ಸಾಯಬಣ್ಣ ಹೆಳವರ, ಪ್ರಮುಖರಾದ ಮಲ್ಲಿಕಾರ್ಜುನ ಬಿ.ಎಚ್., ಎಚ್.ಎನ್. ಗೋಗಿ, ಶ್ರೀಮಂತ ಸೌಂದರ್ಗಿ, ಸುನಿಲಕುಮಾರ ಒಂಟಿ, ಬಸವರಾಜ ಎಸ್.ಹೆಳವರ, ಮಲ್ಲಿಕಾರ್ಜುನ ಹೆಳವರ ಹೆಬ್ಬಾಳ, ಗುರುಲಿಂಗ ಹೆಳವರ, ಹಣಮಂತ್ರಾಯ ಹಳಿಸಗರ, ರಾಘು ಮಾಸ್ತರ್, ಮಲ್ಲಪ್ಪ ತಳ್ಳಳ್ಳಿ, ಪ್ರಭು ಯಾಳಗಿ, ಅಶೋಕ ಹೆಳವರ, ತಿಪ್ಪಣ್ಣ ಹೆಳವರ, ಗಂಗಾಧರ ಹೆಳವರ, ರಾಜು ಹೆಳವರ, ಕುಮಾರ ಯಾದವ್, ಕನಕರೆಡ್ಡಿ ಯಾದವ್ ಇತರರಿದ್ದರು.

ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಲ್ಯಾಣಾಧಿಕಾರಿ ಡಾ.ಕರಿಬಸಮ್ಮ ಪ್ರತಿಭಾವಂತ ಮಕ್ಕಳಿಗೆ ನೋಟ್‌ಬುಕ್ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net