ಸಂಸ್ಕಾರದೊಂದಿಗೆ ಸಾಂಸ್ಕೃತಿಕ ರಾಯಭಾರಿಗಳಾಗಿ

ctd 24 sjm snehkuta-05
Published on


ಚಿತ್ರದುರ್ಗ: ವಿದ್ಯಾರ್ಥಿಗಳು ಸಂಸ್ಕಾರ ಬೆಳೆಸಿಕೊಳ್ಳುವ ಮೂಲಕ ಸಾಂಸ್ಕೃತಿಕ ರಾಯಭಾರಿಗಳಾಗಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆಯ ಶಿವಮೊಗ್ಗ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಪ್ರೊ.ಓಂಪ್ರಕಾಶ ರಾಜೋಳೆ ಸಲಹೆ ನೀಡಿದರು.
ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ವಾರ್ಷಿಕ ಸ್ನೇಹಕೂಟ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ನಾವು ಸಾಮಾನ್ಯರಂತೆ ಇದ್ದರೂ ನಮ್ಮ ವಿಚಾರಗಳು ಅಪ್ರತಿಮ ಆಗಿರಬೇಕು. ಪಠ್ಯೇತರ ಚಟುವಟಿಕೆಗಳಲ್ಲೂ ಪ್ರತಿಭೆ ಅನಾವರಣ ಆಗಬೇಕು. ಜ್ಞಾನಕ್ಕೆ ಶಿಸ್ತು ಬಹಳ ಮುಖ್ಯ. ಶಿಕ್ಷಣ ನಿರಂತರ ಜ್ಞಾನದಾಸೋಹ ನೀಡುತ್ತದೆ ಎಂದು ತಿಳಿಸಿದರು.
ಸರ್ಕಾರಿ ಕಲಾ ಕಾಲೇಜು ಸಹಪ್ರಾಧ್ಯಾಪಕಿ ಡಾ.ತಾರಿಣಿ ಶುಭದಾಯಿನಿ ಮಾತನಾಡಿ, ವರ್ತಮಾನದ ಬದುಕಿಂದು ಸಾಮಾಜಿಕ ಜಾಲತಾಣಗಳಿಂದ ನಡೆಯುತ್ತಿದೆ. ಭ್ರಮೆಯಿಂದ ದೂರುವುಳಿದು ಮಾನವೀಯ ಮೌಲ್ಯಗಳೊಂದಿಗೆ ಬದುಕಬೇಕಿದೆ ಎಂದರು.
ಸಮಾಜ ಸೇವಕ ಡಾ.ಸಿ.ಆರ್.ನಸೀರ್ ಅಹಮದ್, ಪ್ರಾಚಾರ್ಯ ಡಾ.ಎಲ್.ಈಶ್ವರಪ್ಪ ಮಾತನಾಡಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗೂ ಕ್ರೀಡೆ, ಸಾಂಸ್ಕೃತಿಕ, ದೇಸಿ ಉಡುಗೆ, ರಂಗೋಲಿ, ಜಾನಪದ ಹಾಡು, ಪ್ರಬಂಧ ಮತ್ತಿತರ ಸ್ಪರ್ಧಾ ವಿಜೇತರನ್ನು ಗೌರವಿಸಲಾಯಿತು.
ವಿದ್ಯಾರ್ಥಿ ಒಕ್ಕೂಟದ ಚೇರ‌್ಮನ್ ಪ್ರೊ.ಸಿ.ಬಸವರಾಜಪ್ಪ, ಪ್ರಧಾನ ಕಾರ್ಯದರ್ಶಿ ಚಿರಾಗ್ ಆರ್.ಜೈನ್, ಕಾರ್ಯದರ್ಶಿಗಳಾದ ಆಯೆಶಾ ಸಿದ್ದಿಕಾ, ಜೆ.ಚೇತನ ಮತ್ತಿತರರು ಇದ್ದರು. ಪ್ರೊ.ಎನ್.ಚಲುವರಾಜ್ ಸ್ವಾಗತಿಸಿದರು. ಜೈನಬ್ ಹಾಗೂ ಫಾತಿಮಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net