ಸಂಸ್ಕಾರದ ಶಿಕ್ಷಣದಿಂದ ಬದುಕಿಗೆ ಜ್ಞಾನ

sri school
ಮಸಿಗೆ ಶಾಲೆಯಲ್ಲಿ ಅಕ್ಷರದೀಪೋತ್ಸವ ಕಾರ್ಯಕ್ರಮವನ್ನು ಬಿಇಒ ಎನ್.ಜಿ.ರಾಘವೇಂದ್ರ, ಗಂಗಾಧರಪ್ಪ ಉದ್ಘಾಟಿಸಿದರು. ರಾಜೇಶ್, ರಮೇಶ್ ಶೂನ್ಯ, ಶಿವಶಂಕರ್ ಇತರರಿದ್ದರು.
Published on

ಶೃಂಗೇರಿ: ಜ್ಞಾನ ಬೆಳಕು. ಅಜ್ಞಾನ ಕತ್ತಲು. ಕತ್ತಲಿನಿಂದ ಬೆಳಕಿನೆಡೆಗೆ ಸಾಗುವುದೇ ಮನುಷ್ಯನ ಪರಮಗುರಿ. ಈ ಹಾದಿಯಲ್ಲಿ ಸಾಗಬೇಕಾದರೆ ಶಿಕ್ಷಣದ ಜತೆ ಸಂಸ್ಕಾರದ ಅಗತ್ಯವಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಎನ್.ಜಿ.ರಾಘವೇಂದ್ರ ತಿಳಿಸಿದರು.

ಮಸಿಗೆ ಶಾಲೆಯಲ್ಲಿ ಬುಧವಾರ ಅಕ್ಷರದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ಹಚ್ಚುವ ದೀಪ ಸರ್ವರಿಗೂ ಬೆಳಕು ನೀಡಲಿ ಎಂಬ ವಿಶಾಲ ಭಾವ ಎಲ್ಲರಲ್ಲೂ ಇರಬೇಕು. ದೀಪ ಹಚ್ಚುವುದು ಆಧ್ಯಾತ್ಮಿಕ ಮೌಲ್ಯದ ಸಂಕೇತ. ಮಕ್ಕಳ ಅಂತರಂಗದ ಸಾಮರ್ಥ್ಯದ ಬೆಳವಣಿಗೆಗೆ ಶಿಕ್ಷಣ, ನೈತಿಕತೆ ಹಾಗೂ ಆಧ್ಯಾತ್ಮಿಕ ಮುಖ್ಯ. ಮಸಿಗೆ ಶಾಲೆ ಮಕ್ಕಳ ಜತೆ ಪಾಲಕರನ್ನು ಒಗ್ಗೂಡಿಸಿದ ಈ ಕಾರ್ಯಕ್ರಮ ವಿಶೇಷವಾದುದು. ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಪಾಲಕರು, ಶಾಲಾ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ಕೊಡುಗೆ ಮಹತ್ತರವಾದುದು ಎಂದರು.

ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ ಮಾತನಾಡಿ, ಮಕ್ಕಳ ಕ್ರಿಯಾಶೀಲತೆಗೆ ಸರ್ಕಾರಿ ಶಾಲೆಗಳ ಕೊಡುಗೆ ಅನುಪಮ. ಇಲ್ಲಿ ಶಿಕ್ಷಣ ಪಡೆದವರು ಉನ್ನತ ಉದ್ಯೋಗ ಪಡೆದಿದ್ದಾರೆ. ಶಾಲೆಗಳಲ್ಲಿ ಉತ್ತಮ ಶಿಕ್ಷಣ, ಮಕ್ಕಳ ಸೃಜನಶೀಲತೆಗೆ ಪೂರಕವಾದ ಕಾರ್ಯಕ್ರಮ ನಿರಂತರ ನಡೆಯುತ್ತದೆ. ಇದು ಆಶಾದಾಯಕ ಬೆಳವಣಿಗೆ ಎಂದು ಹೇಳಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ದಾನಿಗಳನ್ನು ಗೌರವಿಸಲಾಯಿತು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಗ್ರಾಪಂ ಸದಸ್ಯರಾದ ಯೋಗೀಶ್, ಸಹನಾ ರಮೇಶ್, ಮಾಜಿ ಸದಸ್ಯ ಸಸಿಮನೆ ಶಿವಶಂಕರ್, ಎಸ್‌ಡಿಎಂಸಿ ಅಧ್ಯಕ್ಷೆ ಹೇಮಲತಾ, ಮುಖ್ಯಶಿಕ್ಷಕ ರಾಜೇಶ್, ಉದ್ಯಮಿ ಪಿ.ಬಿ.ಶ್ರೀನಿವಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net