ಸಂಸ್ಕಾರ ನೀಡುವ ಪಾಲಕರೇ ಶ್ರೇಷ್ಠ

21blh1 hannikeri news
ಹಣ್ಣಿಕೇರಿ ಗ್ರಾಮದ ಹಿರೇಮಠ ಜಾತ್ರಾ ಕಾರ್ಯಕ್ರಮವನ್ನು ಶಾಸಕ ಮಹಾಂತೇಶ ದೊಡಗೌಡರ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಉದ್ಘಾಟಿಸಿದರು. ಪ್ರಭುನೀಲಕಂಠ ಸ್ವಾಮೀಜಿ, ರೇವಣಸಿದ್ಧ ಶಿವಾಚಾರ್ಯರು, ಮೃತ್ಯುಂಜಯ ಸ್ವಾಮೀಜಿ ಇತರರು ಇದ್ದರು.
Published on

ಬೈಲಹೊಂಗಲ: ಬಾಳು ಹಸನಾಗಲು ಸಂಸ್ಕಾರ ನೀಡಿ, ಬದುಕು ಪಾವನಗೊಳಿಸುವ ಶಕ್ತಿ ತಂದೆ-ತಾಯಿ ಮತ್ತು ಗುರುವಿಗಿದೆ. ಅವರೇ ಶ್ರೇಷ್ಠ ವ್ಯಕ್ತಿಗಳು ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.

ತಾಲೂಕಿನ ಹಣ್ಣಿಕೇರಿಯಲ್ಲಿ ಗುರವಾರ ಏರ್ಪಡಿಸಿದ್ದ ಹಿರೇಮಠದ ಜಾತ್ರಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ ಮಾತನಾಡಿ, ಜನ್ಮ ನೀಡಿದ ತಂದೆ-ತಾಯಿಯನ್ನು ಸದಾ ಗೌರವಿಸುತ್ತ ಅವರ ರಕ್ಷಣೆ ಮಾಡಬೇಕು. ಪಾಲಕರನ್ನು ವೃದ್ಧಾಶ್ರಮಕ್ಕೆ ತಳ್ಳುವ ಮನೋಭಾವ ಸರಿ ಅಲ್ಲ ಎಂದರು. ಬೈಲಹೊಂಗಲ ಮೂರು ಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಯುವಕರು ನಮ್ಮ ಶ್ರೇಷ್ಠ ಸಂಸ್ಕೃತಿ ಅಳವಡಿಸಿಕೊಂಡು ಆರೋಗ್ಯಭರಿತ ಜೀವನ ಸಾಗಿಸಬೇಕು ಎಂದರು. ಹಿರೇಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ಗಂದಿಗವಾಡ ರಾಜಗುರು ಹಿರೇಮಠದ ಮೃತ್ಯುಂಜಯ ಸ್ವಾಮೀಜಿ ಪ್ರವಚನ ನೀಡಿದರು. ಗ್ರಾಪಂ ಅಧ್ಯಕ್ಷೆ ನೀಲವ್ವ ಶಂಕರಗೌಡ ಪಾಟೀಲ, ರಮೇಶ ಪರವಿನಾಯ್ಕರ, ಶ್ಯಾಮಸುಂದರ ಶಿಲೇದಾರ, ಸಿದ್ದು ವಾರಿ, ಜಗದೀಶ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net