ಸಂಸ್ಕಾರ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

13sor2
ಸೊರಬದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಗೌರವಿಸಲಾಯಿತು. ಡಿ.ಎಸ್.ಶಂಕರ್ ಶೇಟ್, ಜೆ.ಎಸ್.ಮಹಾಂತೇಶ, ಚಂದ್ರಶೇಖರ ನಿಜಗುಣ, ವೀಣಾಕ್ಕ ಇತರರಿದ್ದರು.
Published on

ಸೊರಬ: ಗುರುವಿನ ಉತ್ತಮ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದು ಜಡೆ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಗುರುವಿನ ಮಹಿಮೆ ಅಗಾಧವಾಗಿದೆ. ಮನುಷ್ಯನ ಬಾಳಿನಲ್ಲಿ ಶುದ್ಧ ನಡತೆ ಆಚಾರ, ವಿಚಾರಗಳು ಮೈಗೂಡಿಸಿಕೊಂಡಾಗ ಸಂಸ್ಕಾರ ಮತ್ತು ಗುರು ಪರಂಪರೆಗೆ ಮಹತ್ವ ಹೆಚ್ಚುತದೆ ಎಂದು ತಿಳಿಸಿದರು.

ವೇದವ್ಯಾಸ ಮಹರ್ಷಿಗಳು ಗಣಪತಿ ದೇವರ ಮೂಲಕ 18 ಪುರಾಣ, 4 ವೇದ ರಚಿಸಿದ್ದಾರೆ. ತಾಯಿ ಎಲ್ಲರಿಗೂ ಮೊದಲ ಗುರು. ಭಕ್ತರು ಷರೀಫ ಸಾಹೇಬ ಮತ್ತು ಸಿದ್ಧಾರೂಢ ಗುರುಗಳನ್ನು ವಿಶಿಷ್ಟ ರೂಪದಲ್ಲಿ ಕಾಣುತ್ತಾರೆ. ಗುರುವಿನ ಪಾದದಲ್ಲಿ ಅಗಾಧವಾದ ಚೈತನ್ಯ ಶಕ್ತಿಯಿದೆ. ಆಚಾರವಂತರಾಗಿ ಶ್ರದ್ಧಾಭಕ್ತಿ, ಶುದ್ಧ ಮನಸ್ಸಿನಿಂದ ಗುರುಸೇವೆ ಮಾಡಬೇಕು ಎಂದರು.

ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಾಧನೆಯಿಂದ ಗುರುಗಳನ್ನು ಗುರುತಿಸಬೇಕು. ಗುರು ಆದವರು ಅರಿವಿನ ಜ್ಞಾನದ ಜತೆಗೆ ನಮ್ಮನ್ನು ಕರೆದೊಯ್ಯಬೇಕು. ಗುರುವಿದ್ದರೆ ಜಗತ್ತು, ಗುರುವಿಲ್ಲದ ಜನವಿಲ್ಲ. ಗುರುಸೇವೆ ಮಾಡಿ ಕೃತಾರ್ಥರಾಗಬೇಕು ಎಂದರು.

ಪತ್ರಕರ್ತ ಯು.ಎನ್.ಲಕ್ಷ್ಮೀಕಾಂತ ಮಾತನಾಡಿ, ಗುರು ಎಂದರೆ ಮನೆಯೊಳಗಿನ ಹೆತ್ತವರು, ಹಿರಿಯರು, ಅಕ್ಷರ ಕಲಿಸಿದ ಶಿಕ್ಷಕರು, ಮಾರ್ಗದರ್ಶಕ ಮಾಡಿದ ಮಹನೀಯರು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಎಸ್.ಶಂಕರ್ ಶೇಟ್, ರೋಟರಿ ಕ್ಲಬ್ ಸೊರಬದ ಅಧ್ಯಕ್ಷ ಜೆ.ಎಸ್.ಮಹಾಂತೇಶ, ಚಂದ್ರಶೇಖರ ನಿಜಗುಣ, ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಸಂಚಾಲಕಿ ಬಿ.ಕೆ.ವೀಣಾಕ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net