ಸಂಸ್ಕಾರ ಕಲಿಸಿದ ಸನಾತನ ಧರ್ಮ

30 ydg 02
Published on

ಯಾದಗಿರಿ: ನಮ್ಮ ಸನಾತನ ಧರ್ಮ ಮನುಷ್ಯನಿಗೆ ಭಯ, ಭಕ್ತಿ, ನಂಬಿಕೆ, ದಾನ, ಧರ್ಮ, ಸಂಸ್ಕೃತಿ, ಸಂಸ್ಕಾರ ಕಲಿಸಿದೆ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಹೇಳಿದರು.

ತಾಲೂಕಿನ ಮುಂಡರಗಿ ಗ್ರಾಮದ ಹೊರವಲಯದ ಶಿವ ಚಂದ್ರಗಿರಿ ನಾಗಲಿಂಗೇಶ್ವರ ಮಠದಲ್ಲಿ ಮಂಗಳವಾರ ಹಮ್ಮಿಕೊಂಡ ೧೪ನೇ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ವಿಶೇಷವಾಗಿ ನಾಗರ ಪಂಚಮಿಯAದು ಕಂದಕೂರು ಗ್ರಾಮದ ಬೆಟ್ಟದ ಕೊಂಡಮ್ಮಾಯಿ ಜಾತ್ರೆ ವೇಳೆ ರಾಶಿಗಟ್ಟಲೇ ಹಾವು, ಚೇಳುಗಳು ಹೊರಬಂದು ಜನರೆಲ್ಲ ಅವುಗಳ ಜತೆ ಆಟವಾಡುವುದು ಸಾಮಾನ್ಯ ಮಾತಲ್ಲ. ಅಂತೆಯೇ ಹುತ್ತದಲ್ಲಿನ ನಿಜ ನಾಗರ ಹಾವನ್ನು ಹೊರತೆಗೆದು ಹಾಲುಣಿಸುವುದು ದೈವತ್ವದ ಮಾತು ಎಂದರು.

ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ್ ಮಾತನಾಡಿದರು. ಮಠದ ಪೀಠಾಧಿಪತಿ ಶಿವಚಂದ್ರಶೇಖರ ಮುತ್ಯಾ ಸಾನ್ನಿಧ್ಯ ವಹಿಸಿದ್ದರು. ವಿಶೇಷ ಪೂಜೆ, ಹಲಗೆ, ಡೊಳ್ಳು ಕುಣಿತ, ಕೈ ಕುಸ್ತಿ ಪಂದ್ಯಗಳು ಜರುಗಿದವು. ಕಾರ್ಯಕ್ರಮದಲ್ಲಿ ಹಳಿಗೇರ ಪೀಠದ ಹಣಮಂತ್ರಾಯ ಮುತ್ಯಾ, ರಮೇಶ್ ಕೋಟಿಮನಿ, ಶ್ರೀಧರ್ ಮಹಾಂತೇಶ, ಅಶೋಕ ರೆಡ್ಡಿ ಯಲ್ಹೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net