ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ

10 ckm 1
ಚಿಕ್ಕಮಗಳೂರಿನಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿದ ಕಾಂಗ್ರೆಸ್ ಮುಖಂಡರು ಕೆಎಂ ರಸ್ತೆಯಲ್ಲಿ ಬೀದಿದೀಪ ಅಳವಡಿಕೆ ಮಾಡಿಸುವಂತೆ ಒತ್ತಾಯಿಸಿದರು. ಉಪ್ಪಳ್ಳಿ ಕೆ.ಭರತ್, ಕಬ್ಬಿಕೆರೆ ಮೋಹನ್ ಉಪಸ್ಥಿತರಿದ್ದರು.
Published on

ಚಿಕ್ಕಮಗಳೂರು: ರಾಷ್ಟಿçÃಯ ಹೆದ್ದಾರಿಗಳ ಅಕ್ಕಪಕ್ಕದಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಕಾಂಗ್ರೆಸ್ ಮು ಖಂಡರು ಶುಕ್ರವಾರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಉಪ್ಪಳ್ಳಿ ಕೆ.ಭರತ್, ನಗರದಲ್ಲಿ ಹಾದುಹೋಗಿರುವ ರಾಷ್ಟಿçÃಯ ಹೆದ್ದಾರಿಗಳು ಅಭಿವೃದ್ದಿಪಡಿಸುವ ಸಂದರ್ಭದಲ್ಲಿ ಕ್ರಿಯಾ ಯೋಜನೆಗೊಳಗೆ ವಿದ್ಯುತ್ ಅಳವಡಿಕೆಯ ಬಗ್ಗೆ ಕಾಣಿಸದಿರುವುದರಿಂದ ಗೊಂದಲ ಉಂಟಾಗಿದೆ ಎಂದರು.

ಪ್ರಸ್ತುತ ಕೆ.ಎಂ.ರಸ್ತೆ ದಂಟರಮಕ್ಕಿ ಕೆರೆಯಿಂದ ಲಕ್ಷ್ಮೀಪುರದವರೆಗೂ ಕತ್ತಲೆಮಯವಾಗಿದೆ. ಮೂಡಿಗೆರೆ ಮಂಗಳೂರು ರಸ್ತೆಯಲ್ಲಿ ಬೋಳರಾಮೇಶ್ವರ ದೇವಸ್ಥಾನದಿಂದ ವಸ್ತಾರೆವರೆಗೂ ವಿದ್ಯುತ್ ಸಂಪರ್ಕವಿಲ್ಲ. ಇದರಿಂದ ಅರ್ಧ ಕಟ್ಟಿರುವ ಮನೆ, ಕಟ್ಟಡಗಳು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡುತ್ತಿವೆ ಎಂದು ಹೇಳಿದರು.

ರಾಷ್ಟಿçÃಯ ಹೆದ್ದಾರಿಗಳ ಅಕ್ಕ-ಪಕ್ಕ ಹೊಂದಿಕೊAಡಿರುವ ಹಳ್ಳಿಗಳ ಸಂಪರ್ಕ ರಸ್ತೆಗಳಲ್ಲಿ ಯಾವುದೇ ರೀತಿಯಾದ ಎಚ್ಚರಿಕೆ ಫಲಕಗಳು ಅಥವಾ ತಡೆಗೋಡೆಗಳು ನಿರ್ಮಿಸದಿರುವ ಕಾರಣ ವಾಹನ ಸವಾರರು ಅತೀವೇಗವಾಗಿ ವಾಹನವನ್ನು ಚಲಾಯಿಸಿ ಪ್ರತಿನಿತ್ಯವು ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದರು.

ಕೂಡಲೇ ಸಂಸದರು ರಾಷ್ಟಿçÃಯ ಹೆದ್ದಾರಿ ಸಮಸ್ಯೆಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಕಾಫಿ ಹಾಗೂ ಕೃಷಿ ಚಟುವಟಿಕೆ ವೃತ್ತಿಯಲ್ಲಿ ಕೆಲವು ಸಮಸ್ಯೆಗಳನ್ನು ಬಗೆಹರಿಸಿ ಪರಿಹಾರ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕಬ್ಬಿಕೆರೆ ಮೋಹನ್‌ಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net