ಸಂಸತ್ತಿಗೆ ಅನುಭವ ಮಂಟಪವೇ ಬುನಾದಿ

Aanjaneya
Published on

ಚಿತ್ರದುರ್ಗ: ಬಸವಣ್ಣನ ಚಿಂತನೆಗಳು ಪ್ರಸ್ತುತ ಸಮಾಜಕ್ಕೆ ತುರ್ತು ಚಿಕಿತ್ಸೆ ರೀತಿ ಅಗತ್ಯವಿದ್ದು, ಅದರ ಪಾಲನೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಸೀಬಾರದಲ್ಲಿ ಶುಕ್ರವಾರ ನಡೆದ ಬಸವ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

12ನೇ ಶತಮಾನದಲ್ಲೇ ಮುಂದಿನ ದಿನಗಳಲ್ಲಿ ನಾಡು ಎದುರಿಸುವ ಸಮಸ್ಯೆಗಳಿಗೆ ಬಸವಣ್ಣ ವಚನಗಳ ಮೂಲಕ ಸಂದೇಶ ನೀಡಿದರು. ಈಗಿನ ಸಂಸತ್ತು ಸ್ಥಾಪನೆಗೆ ಅವರ ಅನುಭವ ಮಂಟಪವೇ ಬುನಾದಿಯಾಗಿದೆ ಎಂದರು.

ನೊಂದವರ ಕಣ್ಣೀರು ಹೊರೆಸಿದ ಬಸವಣ್ಣ, ಅಸ್ಪಶ್ಯತೆ, ಮೌಢ್ಯಾಚರಣೆ, ಅಸಮಾನತೆ ವಿರುದ್ಧ ಹೋರಾಟ ನಡೆಸಿದ್ದರ ಫಲ ಇಂದು ಎಲ್ಲ ವರ್ಗದ ಜನ ವಿವಿಧ ಕ್ಷೇತ್ರದಲ್ಲಿ ಸ್ಥಾನಮಾನ ಪಡೆದು, ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ, ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ, ಮುಖಂಡರಾದ ಅನಿಲ್ ಕೋಟಿ, ಎಲ್‌ಐಸಿ ಈರಣ್ಣಯ್ಯ, ರವಿ ಬಿ.ಜಿ.ಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net