ಸಂಸತ್ ಸಮಿತಿ ಭೇಟಿ ರಾಜಕೀಯ ಪ್ರೇರಿತ

Priyank Kharge
Published on

ಕಲಬುರಗಿ: ರಾಜ್ಯಕ್ಕೆ ಜಂಟಿ ಪಾರ್ಲಿಮೆಂಟ್ ಕಮಿಟಿಯ ಜಗದಾಂಬಿಕಾ ಪಾಲ್ ಭೇಟಿ ನೀಡಿರುವುದು ರಾಜಕೀಯ ಪ್ರೇರಿತ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಂಟಿ ಪಾರ್ಲಿಮೆಂಟ್ ಕಮಿಟಿಯ ಎಲ್ಲ ಸದಸ್ಯರು ಬರಬೇಕಲ್ವಾ? ಬರೀ ಅಧ್ಯP್ಷÀರು ಮಾತ್ರ ಬಂದಿz್ದÁರೆ. ಅವರೊಂದಿಗೆ ಬಿಜೆಪಿ ಮಾಜಿ ಸಂಸದ ಇz್ದÁರೆ. ಅವರೆಲ್ಲ ಕಮಿಟಿಗೆ ಏನು ಸಂಬAಧ? ಎಂದು ಪ್ರಶ್ನಿಸಿದರು. ವಕ್ಫ್ ತೆಗೆಯಬೇಕು ಅಂತ ಬಿಜೆಪಿಯವರು ಹೇಳುತ್ತಾರೆ. ಒಂದೂವರೆ ವರ್ಷದ ಹಿಂದೆ ಬಿಜೆಪಿ ಸರ್ಕಾರವೇ ಇತ್ತು. ಅಂದು ಏನು ಕತ್ತೆ ಕಾಯುವ ಕೆಲಸ ಮಾಡುತ್ತಿದ್ರಾ ಎಂದು ಪ್ರಶ್ನಿಸಿದರು.

ಮುಂಚೆಯಿAದಲೂ ರೈತರಿಗೆ ನೋಟಿಸ್ ಬಂದಿವೆ. ಸಮಿತಿ ಬಂದಿರುವುದು ರಾಜಕೀಯ ಪ್ರೇರಿತ. ಚುನಾವಣೆ ಬಂದಾಗ ಇದನ್ನು ದೊಡ್ಡ ವಿಷಯ ಮಾಡುತ್ತಿz್ದÁರೆ. ವಕ್ಫ್ ಆಸ್ತಿಯನ್ನು ಜಿಐಎಸ್ ಮ್ಯಾಪ್ ಮಾಡಿಸುತ್ತಿರುವುದು ಯಾರು? ಬಿಜೆಪಿಯವರೇ ಮಾಡುತ್ತಿರೋದಲ್ವಾ? ಇದಕ್ಕೆ ಶೋಭಾ ಕರಂದ್ಲಾಜೆ ಏನ್ ಹೇಳ್ತಾರೆ?. ಅಂದು ಏಕೆ ಶೋಭಾ ಪ್ರತಿಭಟಿಸಿಲ್ಲ. ವಕ್ಫ್ ಆಸ್ತಿ ರಕ್ಷಿಸುತ್ತೇವೆ ಎಂದು ಜಿಐಎಸ್ ಮ್ಯಾಪಿಂಗ್‌ಗೆ ೩೩೦ ಕೋಟಿ ರೂ. ಖರ್ಚು ಮಾಡಿದ್ದು, ಬಿಜೆಪಿಯ ಕೇಂದ್ರ ಸರ್ಕಾರ ಅಲ್ವಾ? ಕೇಂದ್ರದಲ್ಲಿ ಬಿಜೆಪಿ ಸರ್ಕಾರ ೧೧ ವರ್ಷ ಆಯಿತು ಏಕೆ ಬ್ಯಾನ್ ಮಾಡಿಲ್ಲ ಎಂದು ಹರಿಹಾಯ್ದರು.

ಮುಖ್ಯಮಂತ್ರಿ ವಿರುದ್ಧ ಲೋಕಾಯುಕ್ತ ತನಿಖೆ ನಡೆಯುತ್ತಿರುವುದನ್ನು ಬಿಜೆಪಿ ವ್ಯಂಗ್ಯ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಲೋಕಾಯುಕ್ತ ಸಂವಿಧಾನಾತ್ಮಕ ಸಂಸ್ಥೆ. ಇವರು ಸಿಬಿಐ ಎನ್ನುತ್ತಿದ್ದಾರೆ. ನಾವು ಅಧಿಕಾರದಲ್ಲಿ ಹಿಂದೆ ಇz್ದÁಗ ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರವಿತ್ತು. ಆಗ ನಾವು ಸಿಬಿಐಗೆ ಎಷ್ಟು ಕೇಸು ಕೊಟ್ಟಿz್ದೆವು, ಏನಾಗಿದೆ ? ಸುಮ್ಮನೆ ಸಿಬಿಐ ಅಂದರೆ ಹೇಗೆ. ಡಿಎಸ್‌ಪಿ ಗಣೇಶ ಪ್ರಕರಣ, ಪರೇಶ ಮೇಸ್ತಾ ಪ್ರಕರಣ, ಗಣಿ ಹಗರಣ ಏನಾಯಿತು? ಎಂದ ಅವರು, ಸಿಬಿಐ ಅವರು ನಮಗೆ ಯಾವುದೇ ಕೇಸ್ ಒಪ್ಪಿಸಬೇಡಿ ಎಂದು ಪತ್ರ ಬರೆದಿದ್ದೂ ಇದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net