ಸಂಶೋಧನೆಯ ಲಾಭ ಜನತೆಗೆ ಲಭಿಸಲಿ

11Ravig5
ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ತ್ತೀಚೆಗೆ ಚಿಕ್ಕಮಕ್ಕಳ ಎಂಡೋಕ್ರಿನಾಲಾಜಿ ವಿಭಾಗವನ್ನು ಕಾಹೆರ್ ಉಪಕುಲಪತಿ ಡಾ.ನಿತಿನ ಗಂಗಾಣೆ ಲೋಕಾರ್ಪಣೆಗೊಳಿಸಿದರು. ವೈದ್ಯಕೀಯ ನಿರ್ದೇಶಕ ಡಾ.ಎಂ.ದಯಾನಂದ, ಡಾ.ವಿ.ಎ.ಕೋಠಿವಾಲೆ, ಡಾ.ಸಂಜೀವಕುಮಾರ್,ಡಾ.ರಿತಿಕೇಶ್ ಪಾಟ್ನಾಯಕ ಇದ್ದರು.
Published on

ಬೆಳಗಾವಿ: ಜನರ ಆರೋಗ್ಯ ಕಾಪಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಸಂಶೋಧನಾಧಾರಿತ ಚಟುವಟಿಕೆಗಳು ಹೆಚ್ಚಾಗಬೇಕು. ಸಂಶೋಧನೆಗಳ ಧನಾತ್ಮಕ ಫಲಿತಾಂಶ ಜನಸಾಮಾನ್ಯರಿಗೂ ಲಭಿಸುವಂತಿರಬೇಕು ಎಂದು ಕಾಹೆರ್ ಉಪಕುಲಪತಿ ಪ್ರೊ.ನಿತಿನ್ ಗಂಗಾಣೆ ಅಭಿಪ್ರಾಯಪಟ್ಟರು.

ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ನೂತನವಾಗಿ ಪ್ರಾರಂಭಿಸಲಾದ ಪ್ರಾಸ್ಥೆಟಿಕ್ಸ್ ಮತ್ತು ಆರ್ಥೋಟಿಕ್ಸ್ (ಕೃತಕ ಕಾಲು) (ಪ್ರಾಸ್ತೆಟಿಕ್ಸ್ ಮತ್ತು ಆರ್ಥೋಟಿಕ್ಸ್ ವಿಭಾಗದ ವಿಸ್ತರಣೆ) ಪ್ರಯೋಗಾಲಯ ಹಾಗೂ ಚಿಕ್ಕಮಕ್ಕಳ ಎಂಡೋಕ್ರಿನಾಲಾಜಿ ವಿಭಾಗವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

ಈ ವಿಭಾಗದಿಂದ ಬೆಳವಣಿಗೆಯ ಸಮಸ್ಯೆಗಳು (ಸಣ್ಣ ನಿಲುವು) ಮಕ್ಕಳಲ್ಲಿ ಡಯಾಬಿಟಿಸ್ (ಮಧುಮೇಹ) ತೊಂದರೆ, ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗುವದು, ಥೈರಾಯ್ಡ ಗ್ರಂಥಿ ಸಮಸ್ಯೆಗಳು, ಫ್ರೌಢವಸ್ಥೆಯ ತೊಂದರೆಗಳು, (ಮುಂಚೆ ಅಥವಾ ತಡವಾದ ಫ್ರೌಢವಸ್ಥೆ), ಹದಿಹರೆಯದ ಹುಡುಗಿಯರಲ್ಲಿ ಪಾಲಿಸಿಸ್ಟಿಕ್ ಓವಿರಿಯನ್ ಸಿಂಡ್ರೋಮ್ ಮತ್ತು ಮುಟ್ಟಿನ ಸಮಸ್ಯೆಗಳು, ಅಂತರ ಲೈಂಗಿಕ ಸಮಸ್ಯೆಗಳು, ಮಕ್ಕಳಲ್ಲಿ ಸ್ಥೂಲಕಾಯ (ಬೊಜ್ಜು), ಮೂಳೆ ಮತ್ತು ಕ್ಯಾಲ್ಸಿಯಂ ತೊಂದರೆ, ಸ್ಟಿರಾಯ್ಡಿ ಮತ್ತು ಅದರ ಸಂಬಂಧಿತ ಅಡ್ಡಪರಿಣಾಮಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲದೆ ಅದಕ್ಕೆ ಅವಶ್ಯವಿರುವ ಎಲ್ಲ ರೀತಿ ವೈದ್ಯಕೀಯ ತಪಾಸಣೆ ನೆರವೇರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಎಂ.ದಯಾನಂದ ಮಾತನಾಡಿ, ಅಂಕವಿಕಲರಿಗೆ ಉತ್ತಮ ಚಿಕಿತ್ಸೆ ನೀಡಲು ಮತ್ತು ಸರ್ಕಾರದಿಂದ ವಿವಿಧ ಯೋಜನೆ ಜಾರಿಗೊಳಿಸಿ, ಅಂಗವಿಕಲರ ಸಬಲೀಕರಣಗೊಳಿಸಬೇಕು ಎಂದು ಸಲಹೆ ನೀಡಿದರು. ಕಾಹೆರ್ ಕುಲಸಚಿವ ಡಾ.ವಿ.ಎ.ಕೋಠಿವಾಲೆ, ಫಿಜಿಯೋಥೆರೆಪಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸಂಜೀವ್ ಕುಮಾರ್, ಪ್ರಾಸ್ಥೆಟಿಕ್ಸ್ ಮತ್ತು ಆರ್ಥೋಟಿಕ್ಸ್ ವಿಭಾಗದ ಡಾ.ರಿತಿಕೇಶ್ ಪಾಟ್ನಾಯಕ್, ಡಾ.ಸಿಬಾನಿ ಪ್ರಿಯದರ್ಶಿನಿ, ಡಾ.ಘನಶ್ಯಾಮ್ ಪ್ರಧಾನ್, ಚಿಕ್ಕಮಕ್ಕಳ ಎಂಡೋಕ್ರಿನಾಲಾಜಿ ಚಿಕ್ಕಮಕ್ಕಳ ತಜ್ಞ ವೈದ್ಯರಾದ ಡಾ.ಮೀನಾಕ್ಷಿ ಬಿ.ಆರ್., ಡಾ.ಶ್ವೇತಾ ಪಾಶ್ಚಾಪೂರೆ, ಡಾ.ಬಸವರಾಜ ಬಿಜ್ಜರಗಿ, ಡಾ. ರಾಜಶೇಖರ ಸೋಮನಟ್ಟಿ ಇತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net