ಸಂಶೋಧನೆಗಳಿಂದ ಹೊಸತು ಕಂಡುಕೊಳ್ಳಿ

13-111
ಬೆಳಗಾವಿ ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕುಟಿಕಾನ್-2022 13ನೇ ‘ಭಾರತೀಯ ಚರ್ಮರೋಗ ವೈದ್ಯರ ಸಮ್ಮೇಳನ’ವನ್ನು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಉದ್ಘಾಟಿಸಿದರು. ಡಾ.ದಿನೇಶ ಕುಮಾರ್, ಡಾ.ಎಸ್.ಸಿ. ನಟರಾಜ್, ಡಾ.ರವಿ ಯಾದವ್, ಡಾ.ಸುಹಾಸ್ ಮಂಜ್ರೇಕರ್, ಡಾ.ಎನ್.ಎಸ್.ಮಹಾಂತಶೆಟ್ಟಿ, ಡಾ. ವಿ.ಎ.ಕೋಠಿವಾಲೆ ಇತರರಿದ್ದರು.
Published on

ಬೆಳಗಾವಿ: ವೈದ್ಯ ವಿಜ್ಞಾನವು ನಿರಂತರವಾಗಿ ಬೆಳವಣಿಗೆ ಹೊಂದುತ್ತಿದ್ದು, ಉನ್ನತ ಶಿಕ್ಷಣದಲ್ಲಿ ಸಂಶೋಧನೆಗಳ ಮೂಲಕ ಸದಾ ಹೊಸತು ಕಂಡುಕೊಳ್ಳಬೇಕು ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ, ಕಾಹೇರ್ ಕುಲಾಧಿಪತಿ ಡಾ.ಪ್ರಭಾಕರ ಕೋರೆ ಹೇಳಿದರು.
ಇಂಡಿಯನ್ ಅಸೋಸಿಯೇಶನ್ ಆಫ್ ಡೆರ್ಮಟಾಲಾಜಿ, ವೆನೆರಾಲಾಜಿಸ್ಟ್ ಮತ್ತು ಲೆಪ್ರೋಲಾಜಿಸ್ಟ್ ಕರ್ನಾಟಕ ಘಟಕ, ಬೆಳಗಾವಿ ವೈದ್ಯಕೀಯ

ವಿಜ್ಞಾನಗಳ ಸಂಸ್ಥೆ (ಬಿಮ್ಸ್), ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಕುಟಿಕಾನ್-2022ರ 13ನೇ ಭಾರತೀಯ ಚರ್ಮರೋಗ ವೈದ್ಯರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಚರ್ಮರೋಗ ವಿಭಾಗದಲ್ಲಿ ಶೈಕ್ಷಣಿಕ ಆವಿಷ್ಕಾರಗಳ ವಿನಿಮಯ ಮತ್ತು ಮಿತಿಗಳೊಂದಿಗೆ ವೈದ್ಯ ವಿಜ್ಞಾನವು ಪ್ರಗತಿಯಲ್ಲಿದೆ. ವೈದ್ಯ ವಿಜ್ಞಾನದಲ್ಲಿ ಚರ್ಮಶಾಸ್ತ್ರವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಚರ್ಮವು ಇಡಿ ದೇಹವನ್ನು ಆವರಿಸುವ ದೊಡ್ಡ ಅಂಗಾಂಶವಾಗಿದೆ. ಸೋರಿಯಾಸಿಸ್, ವಿಟಲಿಗೋ, ಸುಟ್ಟ ಗಾಯಗಳು, ಚರ್ಮದ ಕ್ಯಾನ್ಸರ್, ವಿವಿಧ ರೋಗಗಳಿಗೆ ಒಡ್ಡಿಕೊಳ್ಳುತ್ತದೆ. ಈ ಕೆಲ ವು ಕಾಯಿಲೆಗಳಿಗೆ ದೀರ್ಘಕಾಲದ ಚಿಕಿತ್ಸೆಯ ಅಗತ್ಯವಿದೆ. ಕೌಶಲ, ಜ್ಞಾನ, ಕ್ಲಿನಿಕಲ್ ತಂತ್ರಗಳು ಮತ್ತು ಅನುಭವಗಳ ವಿನಿಮಯವನ್ನು ಯುವ ವೈದ್ಯರೊಂದಿಗೆ ಹಂಚಿಕೊಳ್ಳಬೇಕು ಮತ್ತು ಕಲಿಕೆ-ಬೋಧನೆ ಉಪಕ್ರಮಗಳನ್ನು ಇನ್ನಷ್ಟು ಬಲಪಡಿಸಬೇಕು ಎಂದರು.

ಐಎಡಿವಿಎಲ್ ಪ್ರಧಾನ ಕಾರ್ಯದರ್ಶಿ ಡಾ.ದಿನೇಶಕುಮಾರ್ ದೇವರಾಜ ಮಾತನಾಡಿ, ಡರ್ಮಟಾಲಜಿಸ್ಟ್ ಅಸೋಸಿಯೇಷನ್ ಅತಿ ಹೆಚ್ಚು ತಜ್ಞ ವೈದ್ಯರನ್ನು ಹೊಂದಿದ ದೇಶದ 2ನೇ ದೊಡ್ಡ ವೈದ್ಯಕೀಯ ಸಂಘ. ಶಿಕ್ಷಣದಿಂದ ಸಮಾಜದಲ್ಲಿ ಪರಿವರ್ತನೆ ಸಾಧ್ಯ.

ಅದು ಉತ್ತುಂಗದಲ್ಲಿ ನಿಲ್ಲುತ್ತದೆ. ದೇಶಕ್ಕಾಗಿ ನಾವು ಏನು ಮಾಡಿದ್ದೇವೆ ಎನ್ನುವು ದನ್ನು ಅರಿತು ಕಾರ್ಯ ಮಾಡಬೇಕು. ದೇಶ ಹಾಗೂ ಸಮಾಜವು ನಮಗೆ ನೀಡಿದ ಕೊಡುಗೆ ಮರೆಯಬಾರದು. ಆರೋಗ್ಯದ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಿರಂತರವಾಗಿರಬೇಕು. ಎಲ್ಲರೂ ಕೂಡಿಕೊಂಡು ನೀಡಿದ ಕೊಡುಗೆ ಮತ್ತು ಭಾಗವಹಿಸುವಿಕೆ ಬಹುಮುಖ್ಯ. ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸಬೇಕು ಎಂದರು.
ಡಾ.ಎಸ್.ಸಿ.ನಟರಾಜ್ ಅವರಿಗೆ ಚರ್ಮರೋಗ ವಿಭಾಗವನ್ನು ಶ್ರೀಮಂತಗೊಳಿಸಿದ್ದಕ್ಕಾಗಿ ಜೀವ ಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ರವಿ ಯಾದವ್ ಮಾತನಾಡಿದರು. ಡಾ.ಸುಹಾಸ್ ಮಂಜ್ರೇಕರ್ ಸ್ವಾಗತಿಸಿದರು. ಕಾಹೆರ್ ಉಪಕುಲಪತಿ (ಉಸ್ತುವಾರಿ) ಡಾ.ಎನ್.ಎಸ್.ಮಹಾಂತಶೆಟ್ಟಿ, ಕುಲಸಚಿವ ಡಾ.ವಿ.ಎ. ಕೋಠಿವಾಲೆ, ಡಾ.ಅಶೋಕ ಕುಮಾರ ಶೆಟ್ಟಿ, ಡಾ.ರವಿ ರಾಥೋಡ, ಡಾ.ಪ್ರಕಾಶ ಕೋಲೊಲ್ಗಿ, ಡಾ.ಸವಿತಾ ಎ.ಎಸ್., ಡಾ.ಡಿ.ಪಿ. ಜಯಂತ, ಡಾ.ವೀರೇಶ ಡಿ., ಡಾ.ಶಿವಕುಮಾರ ಪಾಟೀಲ, ಡಾ. ಸುಶ್ರತಾ ಕಾಮೋಜಿ, ಡಾ.ಸತೀಶ ಗೋಖಲೆ, ಡಾ. ಸಂತೋಷ ಶಿಂಧೆ, ಡಾ.ಎ.ಎಂ.ಪಂಡಿತ, ಡಾ.ಭಾವನಾ ದೋಶಿ ಇದ್ದರು. 500ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net